ಪಾವಗಡ : ಪಾವಗಡದಲ್ಲಿ ಎಗ್ಗಿಲ್ಲದೇ ನಡೀತಿದ್ಯಾ ಅಕ್ರಮ ಕಲ್ಲಿದ್ದಲು ದಂಧೆ..?

ಮರಗಳನ್ನು ಕಡಿದಿರುವುದು.
ಮರಗಳನ್ನು ಕಡಿದಿರುವುದು.
ತುಮಕೂರು

ಪಾವಗಡ :

ಅದು ಹೇಳಿ ಕೇಳಿ ಬರದ ನಾಡು, ಎತ್ತ ನೋಡಿದರೂ ಚಾಲಿಗಿಡಗಳೇ ಇದ್ದು, ದಟ್ಟ ಕಾಡು ಸಿಗುವುದು ಅಪರೂಪ. ಈ ನಡುವೆ ಯಥಾ ರಾಜ ತಥಾ ಪ್ರಜೆ ಎಂಬಂತೆ ಕಂಡು ಕಾಣದಂತೆ ಅಧಿಕಾರಿಗಳು ಇದ್ದಾರೆ, ಪಾವಗಡದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಘಟಕಗಳು ತಲೆಎತ್ತಿದ್ದು, ಕಲ್ಲಿದ್ದಲು ದಂಧೆ ನಡೆಯುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡದ ಸುತ್ತಾ-ಮುತ್ತ ಹತ್ತಾರು ಅಕ್ರಮ ಕಲ್ಲಿದ್ದಲು ತಯಾರಿಕ ಘಟಕಗಳು ನಾಯಿಕೊಡೆಗಳಂತೆ ತಲೆಎತ್ತಿದ್ದಾವೆ. ಕಲ್ಲಿದ್ದಲು ತಯಾರಿಸುವ ವೇಳೆ ಬರುವ ವಾಸನೆ ಸುತ್ತಮುತ್ತಲ ಗ್ರಾಮಗಳಿಗೆ ಹರಡ್ತಾ ಇದ್ದು, ಇದರಿಂದ ಗ್ರಾಮದ ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆ, ಅಸ್ತಮಾ ಸೇರಿ ನಾನಾ ಆರೋಗ್ಯ ಸಮಸ್ಯೆ ಹೆಚ್ಚಾಗ್ತಾ ಇದೆ. ಇದರಿಂದ ಜನರು ಮಾರಕ ರೋಗಗಳಿಗೆ ತುತ್ತಾಗ್ತಾ ಇದ್ದು, ನಿತ್ಯ ಸಾವಿನ ಜೊತೆ ಹೋರಾಡುತ್ತಿದ್ದಾರೆ.

ಶಾಲೆಯ ಪಕ್ಕದಲ್ಲೇ ಅಕ್ರಮ ಕಲ್ಲಿದ್ದಲು ಘಟಕ ಇದ್ದು, ಮರಗಳನ್ನು ಸುಡುವ ವೇಳೆ ಬರುವ ಹೊಗೆಯಿಂದ ಶಾಲಾ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾ ಇದ್ದಾರೆ. ಈ ಕಲ್ಲಿದ್ದಲು ಉತ್ಪಾದನಾ ಘಟಕಗಳಿಗೆ ಸರ್ಕಾರದಿಂದ ಯಾವುದೇ ಪರ್ಮಿಷನ್‌ ಕೂಡ ಇಲ್ಲ. ಅಕ್ರಮವಾಗಿ ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡ್ತಾ ಇರೋದು, ಕಲ್ಲಿದ್ದಲು ಘಟಕಗಳಿಗೆ ಅಧಿಕಾರಿಗಳ ಕುಮ್ಮಕ್ಕು ಇದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತ ಅನಾರೋಗ್ಯ ಒಂದು ಕಡೆ ಆದರೆ, ಮತ್ತೊಂದು ಕಡೆ ಕಲ್ಲಿದ್ದಲು ಘಟಕಗಳಿಗೆ ಅರಣ್ಯ ಇಲಾಖೆಯ ಕುಮ್ಮಕ್ಕು ಇರೋದು ಬಯಲಾಗುತ್ತಿದೆ. ಏಕೆಂದರೆ ಅಕ್ರಮವಾಗಿ ಮರಗಳನ್ನು ಕತ್ತರಿಸಿ ಕಲ್ಲಿದ್ದಲು ಮಾಡ್ತಿರೋದು ಕಂಡು ಬಂದಿದೆ. ಕಲ್ಲಿದ್ದಲಿಗಾಗಿ ನಿತ್ಯ ನೂರಾರು ಮರಗಳು ಮಾರಣಹೋಮ ಮಾಡಿ, ಅಕ್ರಮವಾಗಿ ಇದ್ದಿಲು ತಯಾರಿಸಿ ಲಾರಿಗಳ ಮುಖಾಂತರ ಸಾಗಾಟ ಮಾಡಲಾಗ್ತಿದೆ. ಅಲ್ಲದೇ ತಮ್ಮ ಜೀವಕ್ಕೆ ಕುತ್ತು ಬರ್ತಾ ಇದ್ದರೂ ಕೂಡ ಸಿಗುವ ಎರಡು ಕಾಸಿಗೆ ಆಸೆ ಪಟ್ಟು ಸ್ಥಳೀಯರು ಕೂಡ ಅಕ್ರಮ ಕಲ್ಲಿದ್ದಲು ದಂಧೆ ನಡೆಯುತ್ತಿದ್ದರೂ ಸುಮ್ಮನೆ ಇದ್ದಾರೆ ಅನ್ನೋದು ಬೇಸರದ ಸಂಗತಿ.

ಒಟ್ಟಾರೆ ದಂಧೆಕೋರರ ಅಕ್ರಮಗಳಿಗೆ ಅರಣ್ಯ ಇಲಾಖೆಯ ಕಣ್ಣ ಮುಚ್ಚಾಲೇ ಆಡುತ್ತಿರುವುದು ಇಂದಲ್ಲ ನಾಳೆ ಗ್ರಾಮಸ್ಥರು ಸಾವಿನ ಬಾಗಿಲು ತಟ್ಡುವುದರಲ್ಲಿ ಸಂಶಯವಿಲ್ಲ. ಅಂದಿನ ಸಾವು ನೋವುಗಳಿಗೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ. ಸಾವು- ನೋವು ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳಿತು.

Author:

...
Sushmitha N

Copy Editor

prajashakthi tv

share
No Reviews