ಕೋಲಾರ: ಚುಚ್ಚು ಮದ್ದು ಪಡೆದ ಯುವಕ ಸಾವು | ವೈದ್ಯರ ವಿರುದ್ದ ಪೋಷಕರ ಆರೋಪ

ಮೃತ ಯುವಕ ವಿನೋದ್‌ (23)
ಮೃತ ಯುವಕ ವಿನೋದ್‌ (23)
ಕೋಲಾರ

ಕೋಲಾರ: 

ಚುಚ್ಚು ಮದ್ದು ಪಡೆದ ಕೆಲವೇ ಗಂಟೆಗಳಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

23 ವರ್ಷದ ವಿನೋದ್‌ ಮೃತ ಪಟ್ಟ ಯುವಕನಾಗಿದ್ದಾನೆ. ಜ್ವರದಿಂದ ಬಳಲುತ್ತಿದ್ದ ವಿನೋದ್‌ ನನ್ನು ಕೋಲಾರ ತಾಲೂಕಿನ ವಕ್ಕಲೇರಿಯಲ್ಲಿರುವ ಸನ್‌ ರೈಸ್‌ ಕ್ಲಿನಿಕ್ ಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು, ಈ ವೇಳೆ ಸನ್‌ ರೈಸ್ ಕ್ಲಿನಿಕ್‌ ನ ವೈದ್ಯ ಡಾ. ರಫೀಕ್‌ ಯುವಕನಿಗೆ ಇಂಜೆಕ್ಷನ್‌ ನೀಡಿದ್ದಾರೆ. ಆದರೆ ಇಂಜೆಕ್ಷನ್‌ ಪಡೆದ ಕೆಲವೇ ಗಂಟೆಗಳಲ್ಲೇ ಯುವಕ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕ ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ.

ವೈದ್ಯರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು. ಸದ್ಯ ಘಟನೆಗೆ ಸಂಬಂಧಪಟ್ಟಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

 

Author:

share
No Reviews