ಕೊರಟಗೆರೆ:
ಕೊಟಗೆರೆಯ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು. ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಏರ್ಪಡಿಸಲಾಗಿದ್ದ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಅಶೋಕ್, ಪಟ್ಟಣ ಪಂಚಾಯ್ತಿ ಪಿಡಿಒ ಯೋಗಾನಂದ, ವಿಶೇಷಾಧಿಕಾರಿ ಎಸ್.ನಾಗಣ್ಣ, ತಹಶೀಲ್ದಾರ್ ಮಂಜುನಾಥ ಸೇರಿ ಹಲವು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ಕೊರಟಗೆರೆ ಜನರ ಬಹು ವರ್ಷದ ಕಸನಾಗಿರುವ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರ್ಕಾರದ ಕೈಸೇರಿದೆ. ಪಪಂಯ 15 ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಹಾಗೂ ೨೫ ಕೋಟಿ ಅನುಧಾನದ ಪ್ರಸ್ತಾವನೆಯ ರೂಪುರೇಷು ಸಿದ್ದವಿದೆ ಎಂದು ಪಪಂ ಸದಸ್ಯರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಇನ್ನು ರಾಜ್ಯದ ಪ್ರತಿ ತಾಲೂಕಿನ ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸರ್ಕಾರ ಸೂಚಿಸಿದೆ. ಕೊರಟಗೆರೆ ಪಟ್ಟಣದ 28 ಕಡೆಗಳಲ್ಲೂ ಸಿಸಿಟಿವಿ ಅಳವಡಿಕೆಗೆ ಚಾಲನೆ ನೀಡಿದ್ದೇನೆ. ಕಾನೂನು ವಿರೋಧಿ ಚಟುವಟಿಕೆ ಮತ್ತು ಕೇಂದ್ರ ಪ್ರಕರಣ ಬೇದಿಸಲು ಸಿಸಿಟಿವಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.
ಇನ್ನು ಇದೇ ವೇಳೆ ಪಟ್ಟಣ ಪಂಚಾಯ್ತಿಯಿಂದ ಪೌರಕಾರ್ಮಿಕರಿಗೆ ೨ವರ್ಷದ ಹಿಂದೆ ನಿರ್ಮಾಣ ಮಾಡಿರುವ ನಿವೇಶನ ಹಂಚಿಕೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ 15 ದಿನಗಳ ಒಳಗಾಗಿ ನಿವೇಶನ ಹಂಚಿಕೆ ಮಾಡದಿದ್ರೆ ಎತ್ತಂಗಡಿ ಮಾಡುವುದಾಗಿ ಕೊರಟಗೆರೆ ಮುಖ್ಯಾಧಿಕಾರಿ ಉಮೇಶ್ ಗೆ ಡಾ.ಜಿ.ಪರಮೇಶ್ವರ್ ಖಡಕ್ ವಾರ್ನಿಂಗ್ ಕೊಟ್ಟರು.