ಪಾವಗಡ:
ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹೊರಹಾಕಲು ಮುಂದಾದ ಪಂಚಾಯ್ತಿ ಸದಸ್ಯನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಚಾಯ್ತಿ ಮುಂದೆಯೇ ಪ್ರತಿಭಟನೆಗೆ ಮುಂದಾಗಿರೋ ಘಟನೆ ಪಾವಗಡ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪಾವಗಡ ಪಟ್ಟಣದ ರೊಪ್ಪ ಗ್ರಾಮ ಪಂಚಾಯ್ತಿಯ ಸದಸ್ಯ ಜಿ.ಎನ್ ಹನುಮಂತರಾಯಪ್ಪ ಎಂಬುವವರು ಪಂಚಾಯ್ತಿಯ ಭ್ರಷ್ಟಾಚಾರವನ್ನು ಹೊರಹಾಕಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದು, ಪಂಚಾಯ್ತಿ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾವಗಡ ಪಟ್ಟಣದ ರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒಗಳದ್ದೇ ದರ್ಬಾರ್ ಆಗಿದ್ದು, ಸುಮಾರು ಆರು ತಿಂಗಳಿನಿಂದ ಸಭೆಯನ್ನೇ ಕರೆದಿಲ್ಲ. ಇವರನ್ನು ಹೇಳುವವರು ಇಲ್ಲ. ಕೇಳುವವರು ಇಲ್ಲ ಎನ್ನುವಂತಾಗಿದೆ. ಈ ಬಗ್ಗೆ ಹಲವು ಬಾರಿ ಅರ್ಜಿ ಕೊಟ್ಟರು ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೇ ಪಂಚಾಯ್ತಿಯ ಸದಸ್ಯರ ಗಮನಕ್ಕೆ ಬಾರದೇ ಗ್ರಾಮ ಪಂಚಾಯ್ತಿ ಅದ್ಯಕ್ಷ ಹಾಗೂ ಪಿಡಿಒ ವಿಜಯ್ ಕುಮಾರ್ ಬಿಲ್ ಮಾಡಿಕೊಂಡು ಲಕ್ಷಾನುಗಟ್ಟಲೇ ಡ್ರಾ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡ್ತಿದ್ದಾರೆ.
ಆರು ತಿಂಗಳ ನಂತರ ಸಾಮಾನ್ಯ ಸಭೆ ಕರೆದು ನಂತರ ಸಭೆಯನ್ನು ರದ್ದು ಮಾಡಿದ್ದಾರಂತೆ. ಈ ಬಗ್ಗೆ ಅಧ್ಯಕ್ಷರನ್ನು ಕೇಳಿದ್ರೆ ಉಪಾದ್ಯಕ್ಷರಿಗೆ ಆರೋಗ್ಯ ಸರಿ ಇಲ್ಲ ಎಂದು ಸಾಬೂಬು ಕೊಡ್ತಾ ಇದ್ದಾರಂತೆ. ಇವರಿಗೆ ಪಂಚಾಯ್ತಿ ಹಣ ಡ್ರಾ ಮಾಡಲು ಆರೋಗ್ಯ ಸರಿ ಇರುತ್ತೆ. ಸಭೆ ಮಾಡಲು ಆರೋಗ್ಯ ಕೈಕೊಡುತ್ತಾ ಎಂದು ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇನ್ನಾದರೂ ಪಾವಗಡ ತಹಶೀಲ್ದಾರ್ ವರದರಾಜು, ಅಧಿಕಾರಿಗಳು ಎಚ್ಚೆತ್ತು ಭ್ರಷ್ಟಾಚಾರ ನಡೆದಿದ್ಯೋ ಇಲ್ಲವೋ ಎಂದು ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒಗಳು ಅವ್ಯವಹಾರ ನಡೆಸಿದ್ದಾರಾ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.