CRICKET: ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು… ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಆಕ್ರೋಶ

ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು
ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು
ಕ್ರಿಕೆಟ್‌

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಚಾಂಪಿಯನ್ ಟ್ರೋಫಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈಗಾಗಲೇ ದುಬೈಗೆ ತೆರಳಿರುವ ಭಾರತದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ್ದು,  ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ. ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ಥಾನದ ಹೆಸರು ಭಾರತ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಮುದ್ರಿಸಲ್ಪಟ್ಟಿದೆ. ಭಾರತೀಯ ಆಟಗಾರರು ಪಂದ್ಯಾವಳಿಯ ಜೆರ್ಸಿ ಧರಿಸಿರುವ ಚಿತ್ರಗಳನ್ನು ಬಿಸಿಸಿಐ ಹಂಚಿಕೊಂಡಿದ್ದು, ಇದರಲ್ಲಿ ಎದೆಯ ಬಲ ಭಾಗದಲ್ಲಿ ಪಾಕಿಸ್ಥಾನದ ಹೆಸರು ಕಾಣಿಸಿಕೊಂಡಿದೆ.

ಇಂದಿನಿಂದ ಆರಂಭಗೊಳ್ಳಲಿರುವ ಮಹತ್ವದ ಐಸಿಸಿ ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳುತ್ತಿವೆ. ಪಾಕಿಸ್ತಾನ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ವಹಿಸಿದೆ.ಹೀಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಹೀಗಾಗಿ ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಪರಿಸ್ಥಿತಿ ಹೀಗಿರುವಾಗಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿರುವುದು 

ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಆರಂಭದಲ್ಲಿ ಭಾರತ ತಂಡದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಮುದ್ರಿತವಾಗುವುದಿಲ್ಲ ಎಂದೇ ಹೇಳಲಾಗುತ್ತು.ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯವಾಗಿರುವುದರಿಂದ,ಟೀಮ್ ಇಂಡಿಯಾ ಜೆರ್ಸಿ ಮೇಲೆ ಚಾಂಪಿಯನ್ಸ್ ಟ್ರೋಫಿ ಲೋಗೊ ಪಕ್ಕದಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ.

2025ರ ಚಾಂಪಿಯನ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ಜೊತೆ ಭಾರತ ತಂಡ ಮೊದಲ ಪಂದ್ಯವಾಡಲಿದೆ. ಫೆಬ್ರುವರಿ 20 ರಂದು ದುಬೈ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಎಲ್ಲ ಸಿದ್ಧತೆಗಳು ನಡೆದಿವೆ. ಪಂದ್ಯದ ವೇಳೆ ಟೀಮ್‌ ಇಂಮಡಿಯಾ   ಆಟಗಾರರು ಧರಿಸುವ ಜೆರ್ಸಿಯನ್ನು ರಿಲೀಸ್ ಮಾಡಲಾಗಿದೆ. ನಾಯಕ ರೋಹಿತ್ ಶರ್ಮಾ, ಪೇಸ್ ಬೌಲರ್ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಜಡೇಜಾ, ಆರ್ಶ್​ ದೀಪ್ ಹೀಗೆ ಎಲ್ಲರೂ ಜರ್ಸಿ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

ಜೆರ್ಸಿ ಮೇಲೆ Champions Trophy 2025 Pakistan ಚಾಂಪಿಯನ್ಸ್‌ ಟ್ರೋಫಿಯ ಮೊದಲ ಉದ್ಠಾಟನಾ ಪಂದ್ಯ   ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಅದರಂತೆ ಭಾರತ ಹಾಗೂ ಪಾಕ್ ನಡುವಿನ ಮ್ಯಾಚ್ ಫೆಬ್ರುವರಿ 23 ರಂದು ದುಬೈ ಸ್ಟೇಡಿಯಂನಲ್ಲಿ ನಡೆಯಲಿದೆ.

Author:

...
Editor

ManyaSoft Admin

Ads in Post
share
No Reviews