ಬೆಂಗಳೂರು : ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಭ್ಯರ್ಥಿಗಳಿಂದ KPSC ವಿರುದ್ದ ಅಕ್ರೋಶ..!

ಬೆಂಗಳೂರು:

ಕರ್ನಾಟಕದಲ್ಲಿ ಎರಡು ಭಾರಿ ಪರೀಕ್ಷೆ ನಡೆದರೂ ಲೋಪ ದೋಷಗಳಿಂದ ಸುದ್ದಿಯಾಗಿದ್ದ KAS 2024 ಪರೀಕ್ಷೆ ನೇಮಕಾತಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಕೆಎಎಸ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ರಕ್ತ ಚಳುವಳಿ ಹೋರಾಟ ನಡೆಯುತ್ತಿದೆ.

ಡಿಸೆಂಬರ್‌ 29ರಂದು ನಡೆದ ಪರೀಕ್ಷೆಯಲ್ಲಿ ಕನ್ನಡ ತರ್ಜುಮೆ ಲೋಪವೆಸಗಿದ್ದು, ಇಂದು ಬೆಂಗಳೂರಿನಲ್ಲಿ KAS ಪರೀಕ್ಷೆ ಬರೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಂದ ರಕ್ತದ ಅಭಿಯಾನ ನಡೆಯುತ್ತಿದೆ. ಅಭ್ಯರ್ಥಿಗಳ ಅಭಿಯಾನಕ್ಕೆ ಕರವೇ ಬೆಂಬಲ ಸೂಚಿಸಿದ್ದು, ನಾರಾಯಣಗೌಡರವರ ನೇತೃತ್ವದಲ್ಲಿ ಗಾಂಧಿನಗರದ ಕರವೇ ಕೇಂದ್ರ ಕಛೇರಿಯಲ್ಲಿ ಅಭಿಯಾನ ಶುರುವಾಗಿದ್ದು, 150 ಕ್ಕೂ ಹೆಚ್ಚು ಅಭ್ಯರ್ಥಿಗಳು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಕೆಪಿಎಸ್‌ ಸಿ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಮಾಧ್ಯಮ ಅಭ್ಯರ್ಥಿಗಳು KPSC ಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಿ ಎಂದು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.

Author:

...
Editor

ManyaSoft Admin

Ads in Post
share
No Reviews