ತುಮಕೂರು:
ಹಿಂದೂ-ಮುಸ್ಲಿಂ ಎನ್ನದೆ ನಾವೆಲ್ಲರೂ ಒಗ್ಗೂಡಿ ಸರ್ಕಾರಗಳ ಹುನ್ನಾರ ವಿರುದ್ಧ ಹೋರಾಡಬೇಕಿದೆ. ನಮ್ಮಗಳ ನಡುವೆ ತಂದಿಟ್ಟು ಖುಷಿ ನೋಡ್ತಾ ಇರೋರಿಗೆ ಸಂದೇಶ ಸಾರಬೇಕಿದೆ ಎಂದು ಜನರಲ್ ಸೆಕ್ರೇಟರಿ ಮತ್ತು ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ವಕ್ಫ್ ತಿದ್ದುಪಡಿ ಕುರಿತಾಗಿ ತುಮಕೂರು ಪ್ರಗತಿ ಪರ ಸಂಘಟನೆಗಳ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರ ಸಭೆಯನ್ನು ನಡೆಸಲಾಯ್ತು. ಈ ವೇಳೆ ಮಾತನಾಡಿದ ನಿಕೇತ್ ರಾಜ್ ಮಾರ್ಯ ತುಮಕೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳು ನಿಧನ ಹೊಂದಿದ್ದ ಸಮಯದಲ್ಲಿ ನಗರದ ಹಲವೆಡೆ ಮುಸ್ಲಿಂ ಬಾಂಧವರು ಮಜ್ಜಿಗೆ, ಪಾನಕ, ನೀರು ಹಂಚಿದ್ರು. ಆದ್ರೆ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದೆ ಎಂದು ಕಿಡಿಕಾರಿದ್ರು. ಕೇಂದ್ರ ಸರ್ಕಾರದ ಹುನ್ನಾರವನ್ನು ಭಾರತೀಯ ಮುಸ್ಲಿಂರು ಎಚ್ಚೆತ್ತುಕೊಳ್ಳಬೇಕಿದೆ. ಅಲ್ದೇ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಹೋರಾಡಬೇಕಿದೆ ಎಂದು ನಿಕೇತ್ ರಾಜ್ ಮೌರ್ಯ ಕರೆ ನೀಡಿದರು.
ಪ್ರಗತಿಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಸರ್ಕಾರಗಳು ಒಂದು ರೀತಿಯಲ್ಲಿ ಸ್ಯಾಡಿಸ್ಟ್ ಇದ್ದ ಹಾಗೇ, ಅಧಿಕಾರಕ್ಕೆ ಬರೋವರೆಗೂ ಜನರ ಕಣ್ಣಿಗೆ ಮಣ್ಣೆರೆಚುವ ನಾಟಕವಾಡ್ತಾರೆ. ಅಧಿಕಾರ ಬಂದ ಮೇಲೆ ಹಿಬ್ಭಾಗ ಮಾಡುವ ಕೆಲಸ ಮಾಡ್ತಾರೆ ಎಂದು ಕಿಡಿಕಾರಿದ್ರು. ಅಲ್ದೇ ಜನರು ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕಿದೆ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಸಿಐಟಿಯು ನಸೈಯದ್ ಮುಜೀಬ್, ಸ್ಲಂ ಜನಾಂದೋಲನ ಕರ್ನಾಟಕದ ಕಾರ್ಯಕರ್ತರು ಸೇರಿ ಹಲವು ಮಂದಿ ಸಾರ್ವಜನಿಕರು ಭಾಗಿಯಾಗಿದ್ದರು.