Nayantara Actress : ಅತೀಹೆಚ್ಚು ಸಂಭಾವನೆ ಪಡೆಯೋದ್ರಲ್ಲಿ ಈಗ ಲೇಡಿ ಸೂಪರ್ ಸ್ಟಾರ್ ನಂ.1

Nayantara Actress :

ಕಾಲಿವುಡ್‌ ನಟಿ ನಯನತಾರಾ ಲೇಡಿ ಸೂಪರ್‌ ಸ್ಟಾರ್‌ ಎಂದೇ ಫೇಮಸ್‌ ಆದ ಇವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಕೇವಲ ತಾರೆ ಅಲ್ಲ, ಬದಲಿಗೆ ಒಂದು ಶಕ್ತಿಯಾಗಿದ್ದಾರೆ. 2 ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುವ ಮೂಲಕ ಶಿಖರವನ್ನು ಏರಿದ ಧೀಮಂತೆಯಾಗಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಸಹ ಎನಿಸಿಕೊಂಡಿದ್ದಾರೆ.

ನಟಿ ನಯನತಾರಾ ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ನಯನತಾರಾ ಅವರನ್ನು ಲೇಡಿ ಸೂಪರ್ ಸ್ಟಾರ್‌ ಎಂದೂ ಸಹ ಕರೆಯುತ್ತಾರೆ. ಈಗಲೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವುದಲ್ಲದೇ, ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಸಹ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಭರ್ಜರಿ ಬೇಡಿಕೆ ಇದ್ದು, ಇದೀಗ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಎನ್ನುವ ಪಟ್ಟ ಪಡೆದುಕೊಂಡಿದ್ದಾರೆ. ಈ ವಿಚಾರವು ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟರೆ, ಅವರ ಜೊತೆ ಸಿನಿಮಾ ಮಾಡಬೇಕು ಎಂದು ಯೋಚಿಸುತ್ತಿರುವ ನಿರ್ಮಾಪಕರಿಗೆ ಇದು ಹೆಚ್ಚು ಚಿಂತೆಯನ್ನು ಉಂಟುಮಾಡಿದೆ ಎನ್ನಲಾಗಿದೆ.

ಇನ್ನು ನಯನತಾರಾ ಲೇಡಿ ಸೂಪರ್‌ ಸ್ಟಾರ್‌ ಎಂದು ಕರೆಸಿಕೊಳ್ಳಲು ಕಾರಣ ಮಾಡಿರೋ ಪಾತ್ರಗಳು ಎಂದೇ ಹೇಳಬಹುದು. ನಟ ಚಿರಂಜೀವಿ ಜೊತೆ ಹೊಸ ಸಿನಿಮಾವೊಂದನ್ನ ಮಾಡುತ್ತಿದ್ದು, ಅವರ ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆಯನ್ನು ಈ ಪಾತ್ರಕ್ಕಾಗಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಯನತಾರಾ ಬಿಗ್‌ ಬಜೆಟ್‌ ಪಡೆಯೋದು 10 ಕೋಟಿ ರೂಪಾಯಿ. ಈ ಮೊದಲು ʼಪಠಾಣ್‌ʼ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಇದೇ ಮಟ್ಟದಲ್ಲಿ ಸಂಭಾವನೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಇದನ್ನು ಸುಮಾರು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಇನ್ನು ನಯನತಾರಾ ಚಿರಂಜೀವಿ ಸಿನಿಮಾಗಾಗಿ 18 ಕೊಟಿ ರೂಪಾಯಿ ಕೇಳಿದ್ದಾರಂತೆ. ಈ ಚಿತ್ರದಲ್ಲಿ ಅವರ ಕಾಲ್‌ ಶೀಟ್‌ ಹೆಚ್ಚಿನ ದಿನ ಇದೆಯಂತೆ. ಅಲ್ಲದೆ ಇವರ ಪಾತ್ರ ಕೂಡ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಕಾರಣ ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇನ್ನು ನಿರ್ಮಾಪಕರು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಇದು ನಿಜವಾದಲ್ಲಿ ನಯನತಾರಾ ದಕ್ಷಿಣ ಭಾರತದ ಹೆಚ್ಚಿನ ಸಂಭಾವನೆ ಪಡೆದ ನಟಿ ಆಗಲಿದ್ದಾರೆ. ಪ್ರಿಯಾಂಕ ಚೋಪ್ರಾ ಅವರು 30 ಕೊಟಿ ರೂಪಾಯಿ ಸಂಭಾವನೆ ಪಡೆದು ಭಾರತದಲ್ಲಿ ಅತಿ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ಕಂಗನಾ ರಣಾವತ್‌ ಅವರು ಕೂಡ 15-20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದು. ಆದರೆ ಬಳಿಕದ ಸ್ಥಾನದಲ್ಲಿ ನಯನತಾರಾ ಇದ್ದಾರೆ ಎಂದು ಹೇಳಲಾಗುತ್ತಿದೆ. 

Author:

...
Sushmitha N

Copy Editor

prajashakthi tv

share
No Reviews