ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..!

ಮೃತ ಕುಟುಂಬ
ಮೃತ ಕುಟುಂಬ
ಮೈಸೂರು

ಮೈಸೂರು:

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.

ಚೇತನ್‌ (45) ಹಾಗೂ ಅವರ ತಾಯಿ ಪ್ರಿಯಂವದಾ (62)  ಚೇತನ್‌ ಹೆಂಡತಿ ರೂಪಾಲಿ (43) ಮತ್ತು ಮಗ ಕುಶಾಲ್‌ (15) ಸಾವನ್ನಪ್ಪಿದ್ದು, ಚೇತನ್‌ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು. ಈ ಕುಟುಂಬ 2019 ರಿಂದ ಮೈಸೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ನೆನ್ನೆ ಕುಟುಂಬ ಸಮೇತ ಗೊರೂರಿಗೆ ಹೋಗಿ ಸಂಜೆ ವಾಪಸ್‌ ಬಂದಿದ್ದು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಮೈಸೂರು ನಗರ ಪೊಲೀಸ್‌ ಕಮಿಷನರ್‌ ಸೀಮಾ ಲಾಟ್ಕರ್‌, DCP ಜಾನ್ಹವಿ ಹಾಗೂ ವಿದ್ಯಾರಣ್ಯಪುರಂ ಇನ್ಸ್ ಪೆಕ್ಟರ್‌ ಮೋಹಿತ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Editor

ManyaSoft Admin

Ads in Post
share
No Reviews