MOVIE : ಸಿನಿಮಾ ಫ್ಲಾಪ್ |ನಾಲ್ಕು ಕೋಟಿ ಹಣ ಮರಳಿಸಿದ ನಟ ಸಿದ್ದು ಜೊನ್ನಲಗಡ್ಡ

MOVIE NEWS : ಇಂದಿನ ಚಿತ್ರರಂಗದಲ್ಲಿ ಸಿನಿಮಾ ಯಶಸ್ವಿಯಾಯಿತೋ ಅಥವಾ ವಿಫಲವಾಯಿತು ಎಂಬುದಕ್ಕಿಂತ ನಟರ ಸಂಭಾವನೆ ಹೆಚ್ಚು ಗಮನ ಸೆಳೆಯುತ್ತಿದೆ. ಆದರೆ ಈ ನಡುವೆ ತೆಲುಗು ಚಿತ್ರರಂಗದ ಯುವ ಪ್ರತಿಭೆ ಸಿದ್ದು ಜೊನ್ನಲಗಡ್ಡ ತಮ್ಮ ಪ್ರಾಮಾಣಿಕ ನಡೆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಿದ್ದು ಜೊನ್ನಲಗಡ್ಡ ಅಭಿನಯಿಸಿದ್ದ ಇತ್ತೀಚಿನ ಸಿನಿಮಾ ‘ಜಾಕ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಸುಮಾರು ₹30 ಕೋಟಿ ಬಜೆಟ್ ಇದ್ದ ಈ ಚಿತ್ರ ಕೇವಲ ₹10 ಕೋಟಿ ಗಳಿಕೆ ದಾಖಲಿಸಿತು. ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಓಡಾಟವಿಲ್ಲದ ಕಾರಣ ನಿರ್ಮಾಪಕರಿಗೆ ಭಾರೀ ನಷ್ಟ ಉಂಟಾಯಿತು. ಈ ಪರಿಸ್ಥಿತಿಯಲ್ಲಿ, ಸಿದ್ದು ತಮ್ಮ ಸಂಭಾವನೆಯ ₹4 ಕೋಟಿ ರೂ. ಯನ್ನು ನಿರ್ಮಾಪಕರಿಗೆ ಹಿಂತಿರುಗಿಸಿ ನೈತಿಕ ಹೊಣೆಗಾರಿಕೆಯ ಅಪೂರ್ವ ಮಾದರಿಯನ್ನೇ ನಿರ್ಮಿಸಿದ್ದಾರೆ.

ಈ ವರ್ಷದ ಏಪ್ರಿಲ್ 10ರಂದು ತೆರೆಕಂಡ 'ಜಾಕ್' ಚಿತ್ರದಲ್ಲಿ ಸಿದ್ದು ರಾ ಏಜೆಂಟ್ ಆಗಬೇಕೆಂಬ ಕನಸು ಕಂಡು ಬದುಕು ಕಟ್ಟಿಕೊಳ್ಳುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ವೈಷ್ಣವಿ ಚೈತನ್ಯ ನಾಯಕಿಯಾಗಿ ನಟಿಸಿದ್ದರು. ಸಿನಿಮಾವನ್ನು ಭರ್ಜರಿ ಪ್ರಚಾರದೊಂದಿಗೆ ಬಿಡುಗಡೆ ಮಾಡಲಾಗಿದ್ದರೂ, ನಿರೀಕ್ಷಿತ ಸ್ಪಂದನೆ ಪಡೆಯಲು ಸಾಧ್ಯವಾಗಿಲ್ಲ.

ಸಿದ್ದುವಿನ ಈ ನಡೆಗೆ ನಿರ್ಮಾಪಕರು ಹಾಗೂ ಇತರ ಸಿನಿತಾರೆಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ಕೇವಲ ಹಣದ ವಿಚಾರವಲ್ಲ. ಇದು ನೈತಿಕತೆ ಮತ್ತು ಜವಾಬ್ದಾರಿಯ ತೋರಿಕೆ,” ಎಂದು ಕೆಲವು ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews