KORATAGERE: ಕೋಟೆ ಮಾರಮ್ಮ ದೇವಿಯ ದರ್ಶನ ಪಡೆದ ಶಾಸಕ ಟಿ.ಬಿ. ಜಯಚಂದ್ರ

ಕೊರಟಗೆರೆ: 

ಕೊರಟಗೆರೆಪಟ್ಟಣದಲ್ಲಿ 2 ಕೋಟಿಯಲ್ಲಿ ನಿರ್ಮಾಣಗೊಂಡಿರು ಇತಿಹಾಸ ಪ್ರಸಿದ್ದ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿಯ ನೂತನ ದೇವಸ್ಥಾನಕ್ಕೆ ಶಿರಾ ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿ ದೇವಿಯ ದರ್ಶನ ಪಡೆದರು.  

ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವ ಕೋಟೆಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೊರಟಗೆರೆ, ಮಧುಗಿರಿ, ಶಿರಾ ತಾಲೂಕುಗಳಲ್ಲಿ ಐತಿಹಾಸಿಕ ದೇವಸ್ಥಾನಗಳು ಕೋಟೆಗಳು ಇವೆ.ಎಲ್ಲಾ ಕಡೆಗಳಲ್ಲೂ ಅವುಗಳನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ. ದೇವರನ್ನ ಮನುಷ್ಯನ ರೂಪದಲ್ಲಿ ಕಾಣಬೇಕಾಗಿದೆ. ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡಬೇಕು.ಈಗಿನ ಯುವ ಪೀಳಿಗೆಯ ಪ್ರತಿಯೊಬ್ಬರಲ್ಲೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಬೇಕು. ಐತಿಹಾಸಿಕ ಇತಿಹಾಸಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ನೂತನ ದೇವಸ್ಥಾನವನ್ನು ವೀಕ್ಷಿಸಿ ಶುಭಹಾರೈಸಿದರು.

ಇನ್ನು ಇತ್ತೀಚೆಗೆ ತಾನೇ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರೋ ಇತಿಹಾಸ ಪ್ರಸಿದ್ಧ ಕೊರಟಗೆರೆ ಪಟ್ಟಣದ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲಯದ ಉದ್ಘಾಟನೆ ಹಾಗೂ ದೇವರುಗಳ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು 2 ಕೋಟಿ ವೆಚ್ಚದಲ್ಲಿ ಗ್ರಾಮ ದೇವತೆ ಕೋಟೆ ಮಾರಮ್ಮ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಶ್ರೀಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ಕಟ್ಟಡ ನಿರ್ಮಾಣ ಸಮಿತಿಯಿಂದ ಕಾರ್ಯಕ್ರಮ ಆಯೋಜ ನೆ ಮಾಡಲಾಗಿತ್ತು, ದೇವಾಲಯದ ಉದ್ಘಾಟನೆಯನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಹಾಗೂ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿಗಳು ನೆರವೇರಿಸಿಕೊಟ್ಟಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರಮ್ಮ ದೇವಿಯ ಸಮಿತಿಯವತಿಯಿಂದ ಶಾಸಕಟಿ.ಬಿಜಯಚಂದ್ರ ಅವರಿಗೆ ಕೊರಟಗೆರೆ ಇತಿಹಾಸದ ದೇವಸ್ಥಾನ ಹಾಗೂ ಬೆಟ್ಟದ ಭಾವಚಿತ್ರವಿರುವ ಫೋಟೋವನ್ನು ಉಡುಗರೆಯಾಗಿ ನೀಡಿ  ಗೌರವಿಸಿದರು.

Author:

...
Keerthana J

Copy Editor

prajashakthi tv

share
No Reviews