ಗುಬ್ಬಿ:
ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಜನ ಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ಸಿ.ಎಸ್.ಪುರ ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡ ಅವ್ವೇರಹಳ್ಳಿ ಕೃಷ್ಣಪ್ಪ, ಬಿಟ್ಟಗೊಂಡನಹಳ್ಳಿ ಕೃಷ್ಣ ಹಾಗೂ ಮುಂತಾದವರು ಭಾಗಿಯಾಗಿದ್ರು.
ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಎಂಟು, ಹತ್ತು ಸಾವಿರ ರೂಗಳಿಗೆ ಸಮಾಜದ ಹಿತ ಕಾಯಲು ದುಡಿಯುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡಿದ್ದರೆ ಸರ್ಕಾರದ ನಡೆ ಒಪ್ಪಬಹುದಿತ್ತು. ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಸರಿನಲ್ಲಿ ತಾಲ್ಲೂಕಿಗೆ 25 ಸಾವಿರ ಹಾಗೂ ಜಿಲ್ಲಾ ಮಟ್ಟಕ್ಕೆ 40 ಸಾವಿರ ಹಾಗೂ ರಾಜ್ಯ ಮಟ್ಟದಲ್ಲಿ ಸಚಿವ ಸ್ಥಾನಮಾನ ಕಲ್ಪಿಸುವುದು ಅಸಂವಿಧಾನ ನಡೆ ಎಂದು ಕಿಡಿಕಾರಿದರು.