GUBBI: ಅದ್ಧೂರಿಯಾಗಿ ಜರುಗಿದ ಮಣ್ಣಮ್ಮ ದೇವಿ ರಥೋತ್ಸವ

ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ
ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ
ತುಮಕೂರು

ಗುಬ್ಬಿ:

ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ ಮುಂಜಾನೆ ಮೂರು ಗಂಟೆ ಸುಮಾರಿಗೆ ಅದ್ಧೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಮಣ್ಣಮ್ಮ ದೇವಿ ರಥೋತ್ಸವ ಹಿನ್ನೆಲೆ ದೇಗುಲಕ್ಕೆ ಹಾಗೂ ರಥಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಗುಬ್ಬಿಯಲ್ಲಿ ಐತಿಹಾಸಿಕ ಗುಬ್ಬಿಯಪ್ಪನ ರಥೋತ್ಸವ ಹೊರತು ಪಡಿಸಿದ್ರೆ ಶ್ರೀ ಮಣ್ಣಮ್ಮ ದೇವಿ ರಥೋತ್ಸವ ತುಂಬಾ ಅದ್ಧೂರಿಯಾಗಿ ನಡೆಯುವ ಜಾತ್ರೆಯಾಗಿದೆ. ಮಣ್ಣಮ್ಮ ದೇವಿಯು ಗುಬ್ಬಿ ತಾಲೂಕಿನ ಬಿದರೆ , ಮಾದಪುರ ,ಇರಕಸಂದ್ರ , ಮೂಕನಹಳ್ಳಿ ಪಟ್ಟಣ ಸೇರಿ  ಸುಮಾರು 33 ಹಳ್ಳಿಗಳ ಆರಾಧ ದೇವಿಯಾಗಿದ್ದು, ಸುಮಾರು ಐದು ದಿನಗಳ ಕಾಲ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಯಿಂದ ಜನಸಾಗರವೇ ಹರಿದು ಬಂದಿತ್ತು.  ದೇವಿಯ ದರ್ಶನ ಪಡೆದು ಸಾವಿರಾರು ಭಕ್ತರು ಪುನೀತರಾದ್ರು.

ಇನ್ನು ಕಳೆದ ಮೂರು ದಿನಗಳಿಂದಲೂ ಮಣ್ಣಮ್ಮ ದೇವಿ ಜಾತ್ರೆ ನಡೆಯುತ್ತಿದ್ದು, ನಿನ್ನೆ ರಾತ್ರಿಯಿಂದ ವಿಶೇಷ ಪೂಜೆ, ಕೈಕಂರ್ಯಗಳು ಜರುಗುತ್ತಿದ್ದು, ಮಧ್ಯರಾತ್ರಿವರೆಗೂ ಮೆರವಣಿಗೆ ನಡೆಯಿತು ಬಳಿಕ ಮೂರು ಗಂಟೆ ಸುಮಾರಿಗೆ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿದ್ದು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದ್ರು. ಇನ್ನು ಇದೇ ಸಂಧರ್ಭದಲ್ಲಿ ಮಣ್ಣಮ್ಮ ದೇವಿಯ ಟ್ರಸ್ವ್ ಅಧ್ಯಕ್ಷರು ಹಾಗೂ ಗುಬ್ಬಿ ಶಾಸಕರಾದ ಎಸ್ ಆರ್.ಶ್ರೀನಿವಾಸ್ ಅವರು ಕುಂಟುಂಬ ಸಮೇತ ಮಣ್ಣಮ್ಮ‌ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.

 

 

Author:

...
Sub Editor

ManyaSoft Admin

share
No Reviews