ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರ್‌ಪೋರ್ಟ್‌ಕಸ್ಟಮ್ಸ್ DRI ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದಬಂದ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನಟಿ ರನ್ಯಾ ರಾವ್ 2014 ರ ಸುದೀಪ್ ನಾಯಕನಾಗಿ ನಟಿಸಿದ ಸೂಪರ್ ಹಿಟ್ ಸಿನಿಮಾದ ಮಾಣಿಕ್ಯ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದೀಗ ನಟಿ ರನ್ಯಾ ರಾವ್ ರಿಂದ ಅಕ್ರಮ ಚಿನ್ನ ಸಾಗಾಟ ಆರೋಪ ಕೇಳಿ ಬಂದಿದೆ. ದುಬೈನಿಂದ ಬಂದ ನಟಿಯನ್ನು ವಿಮಾನ ನಿಲ್ದಾಣದಲ್ಲಿ DRI ತಂಡ ವಶಕ್ಕೆ ಪಡೆದಿದೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದಿರುವ ಆರೋಪದಲ್ಲಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ನಟಿ ನಟಿ ರನ್ಯಾ ರಾವ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗೋಲ್ಡ್‌ನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ರನ್ಯಾ ರಾವ್ ಮೂಲತಃ ಚಿಕ್ಕಮಗಳೂರಿನವರು. ರನ್ಯಾ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ನಟನೆಯಲ್ಲಿ ತೊಡಗಿಕೊಂಡರು.
ನಟಿ ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿದ್ದಾರೆ.ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್ಪೋರ್ಟ್ ಕಸ್ಟಮ್ಸ್ನ ಡಿಆರ್ಐ ಅಧಿಕಾರಿಗಳು ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ ಇದೆ.