ಮಂಗಳೂರು ಬನ್ಸ್ಆರೋಗ್ಯ-ಜೀವನ ಶೈಲಿ
Mangaluru Buns:
ಮಂಗಳೂರು ಬಾಳೆಹಣ್ಣಿನ ಬನ್ಸ್ ಕರಾವಳೀ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ತಿನಿಸು. ಮಂಗಳೂರು ಬನ್ಸ್ ತುಂಬಾ ಜನರ ನೆಚ್ಚಿನ ತಿಂಡಿಯಾಗಿದೆ. ಬಾಳೆಹಣ್ಣಿನ ಬನ್ಸ್ ಅನ್ನು ಮಾಗಿದ ಬಾಳೆಹಣ್ಣು, ಮೈದಾಹಿಟ್ಟು, ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡಿದಾಗ ಬಾಳೆಹಣ್ಣಿನ ಬನ್ಸ್ ರುಚಿ ನೋಡಬಹುದಾಗಿದೆ.
ಎಲ್ಲಾ ತಿಂಡಿಗೂ ಒಂದು ಇತಿಹಾಸ ಇರುತ್ತೇ, ಅದೇ ರೀತಿ ಮಂಗಳೂರು ಬನ್ಸ್ ಹೇಗೆ ಹುಟ್ಟಿಕೊಂಡಿತು ಅಂದರೆ ಸ್ಥಳೀಯರಿಂದಲೇ ರೆಡಿಯಾಗಿದೆ ಈ ತಿಂಡಿ. ಬಾಳೆ ಹಣ್ಣುಗಳು ಸೇಲ್ ಆಗದೇ ಉಳಿತ್ತಿದ್ದಾಗ ಅದರಿಂದ ಏನಾದರೂ ತಿಂಡಿ ಮಾಡಬೇಕು ಎಂದು ಈ ತಿಂಡಿ ರೆಡಿ ಮಾಡಿದ್ರಂತೆ, ಇದು ಬನ್ ರೀತಿ ಉಬ್ಬಿದ್ರಿಂದ ಇದಕ್ಕೆ ಮಂಗಳೂರು ಬನ್ಸ್ ಎಂದು ಹೆಸರಿಟ್ಟರು ಎಂದು ಹೇಳುತ್ತಾರೆ. ಇನ್ನು ಕೆಲವರು ಈ ತಿಂಡಿಯು ಉಡುಪಿ ಮಠದ ಭಟ್ಟರಿಂದ ತಯಾರಾಯಿತು ಎಂದು ಹೇಳುತ್ತಾರೆ. ದೇವಸ್ಥಾನಕ್ಕೆ ಬರುತ್ತಿದ್ದ ಬಾಳೆಹಣ್ಣುಗಳು ಹಾಳಾಗಬಾರದು ಎಂದು ಭಟ್ಟರು ಭಕ್ತರಿಗೆ ಬೆಳಗಿನ ಉಪಾಹಾರಕ್ಕೆ ಈ ತಿಂಡಿ ಮಾಡುತ್ತಿದ್ದರು ಎನ್ನುತ್ತಿದ್ದಾರೆ.
ಬಾಳೆಹಣ್ಣಿನ ಬನ್ಸ್ ಅನ್ನು ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣನ್ನು ಆಯ್ಕೆಮಾಡಿ, ಸಕ್ಕರೆ, ಮೊಸರು, ಉಪ್ಪು, ಅಡಿಗೆ ಸೋಡಾ, ಜೀರಿಗೆ ಮತ್ತು ಮೈದಾಹಿಟ್ಟನ್ನು ಚೆನ್ನಾಘಿ ಮಿಶ್ರಣಮಾಡಿ ರಾತ್ರಿಯಿಡಿ ಹುದುಗಿಸಲಾಗುತ್ತದೆ. ಮರುದಿನ ಹಿಟ್ಟಿನ ಸಣ್ಣ ಭಾಗಗಳನ್ನು ಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ, ಬನ್ ಕಂದು ಬಣ್ಣಕ್ಕೆ ತಿರುಗಿದ ನಂತರ ಬಾಣಲೆಯಿಂದ ತೆಗೆದು ಸೋಸಲಾಗುತ್ತದೆ. ಆಲೂಗಡ್ಡೆ ಮತ್ತು ಕ್ಯಾರೆಟ್ ನಿಂದ ತಯಾರಿಸಲಾಗುವ ಸಾಗು, ತೆಂಗಿನಕಾಯಿ ಚಟ್ನಿ ಬಾಳೆಹಣ್ಣಿನ ಬನ್ಸ್ ಅನ್ನು ನಂಜಿಸಿಕೊಳ್ಳಲು ಉತ್ತಮವಾಗಿರುತ್ತದೆ.
ಕರಾವಳಿ ಕರ್ನಾಟಕ ನಗರಗಳಾದ ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಮುಂತಾದ ಕಡೆಯ ಹೆಚ್ಚಿನ ಉಪಹಾರ ಗೃಹಗಳು ಮತ್ತು ಬೇಕರಿಗಳಲ್ಲಿ ಬಾಳೆಹಣ್ಣಿನ ಬನ್ಸ್ ಸುಲಭವಾಗಿ ಸಿಗುತ್ತದೆ.