ಮಂಗಳೂರು :
ಮೇ 1 ನೇ ತಾರೀಕು ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಮಂಗಳೂರಿನಲ್ಲಿ ನಡೆದ ಈ ಭೀಕರ ಕೊಲೆಗೆ ಜನ ಬೆಚ್ಚಿಬಿದ್ದಿದ್ದರು. ಕೊಲೆ ದೃಶ್ಯಗಳನ್ನು ಆಧರಿಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಫಾಝಿಲ್ ಹತ್ಯೆ ಪ್ರಕರಣದ ಎ1 ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ಸ್ಕೇಚ್ ಹಾಕಿದ್ದು. ಹಲವು ದಿನಗಳಿಂದ ಕಾಯ್ತಿದ್ದು ಫಾಝಿಲ್ ತಮ್ಮ ಆದಿಲ್ ಎಂಬಾತ ಮತ್ತು ಆತನ ತಂಡ ಕೊನೆಗೂ ಸುಹಾಸ್‌ನನ್ನು ನಡುರಸ್ತೆಯಲಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಸದ್ಯ ಕೊಲೆಗೈದಿದ್ದ 8 ಆರೋಪಿಗಳನ್ನು ಬಜ್ಪೆ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಇಂದು ಮಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಗಳೂರು ಎಸ್ ಪಿ ಅನುಪಮ್ ಅಗರ್ವಾಲ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಲೆಗೈದಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಸಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಮತ್ತು ರಂಜಿತ್ ಎಂಬುವರನ್ನು ಬಂಧಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.
ಆರೋಪಿ ಸಫ್ವಾನ್ ಮೇಲೆ 2023 ರಲ್ಲಿ ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್ ಮತ್ತು ಧನರಾಜ್ ಹಲ್ಲೆ ಮಾಡಿದ್ದರು. ಇದರಿಂದ ಸಫ್ವಾನ್ ತನ್ನನ್ನು ಸುಹಾಸ್ ಕೊಲೆ ಮಾಡ್ತಾನೆ ಅನ್ನೋ ಭಯ ಶುರುವಾಗಿತ್ತಂತೆ. ಈ ಕಾರಣಕ್ಕೆ ಸುಹಾಸ್‌ನನ್ನು ಸಫ್ವಾನ್ ಅವರ ತಂಡ ಕೊಲೆ ಮಾಡಿದೆ ಎನ್ನಲಾಗಿದೆ.
ಫಾಝೀಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಕೊಲ್ಲಲು ಫಾಝಿಲ್ ಸಹೋದರ ಆದಿಲ್ ಮೆಹರೂಪ್ ಸಫ್ವಾನ್ ನನ್ನ ಸಂಪರ್ಕಿಸಿದ್ದನಂತೆ. ತನಗೆ ಆಗಿರೋ ಅನ್ಯಾಯದ ಬಗ್ಗೆ ಕೂಡ ಚರ್ಚಿಸಿದ್ದನಂತೆ. ಅದರಂತೆ ಸಫ್ವಾನ್ ಮತ್ತು ಆದಿಲ್ ಇಬ್ಬರೂ ಸೇರಿ ಸುಹಾಸ್ ಕೊಲೆ ಮಾಡೋಕೆ ಸ್ಕೇಚ್ ಹಾಕಿದ್ದು. ಈ ಡೀಲ್ ಸುಮಾರು 5 ಲಕ್ಷಕ್ಕೆ ಕುದುರಿತ್ತು ಎನ್ನಲಾಗಿದೆ. ಅದರಂತೆ ಸಫ್ವಾನ್ ಮನೆಯಲ್ಲಿ ಆದಿಲ್ ಸೇರಿ ಇತರರು ಸುಹಾಸ್ ಕೊಲೆಗೆ ಪ್ಲಾನ್ ಮಾಡಿದ್ರು ಎನ್ನಲಾಗಿದೆ. ಇನ್ನು ಮೇ 1 ರಂದು ಬೆಳಗ್ಗೆಯಿಂದಲೇ ಸುಹಾಸ್ ಚಲನವಲನ ಗಮನಿಸಿದೆ ಅವರು ಸಂಜೆ ವೇಳೆ ರಸ್ತೆಯಲ್ಲಿ ಸಿಕ್ಕ ಸುಹಾಸ್ ನನ್ನು ಬರ್ಬರವಾಗಿ ಕೊಲೆಗೈದಿದ್ದಾರೆ ಎನ್ನಲಾಗಿದೆ.