ಮಂಡ್ಯ: ಯುವತಿ ವಿಚಾರಕ್ಕಾಗಿ ಫೇಸ್ ಬುಕ್ ಲೈವ್ ನಲ್ಲೇ ಯುವಕನಿಗೆ ಹೊಡೆದ ಗ್ಯಾಂಗ್..!

ಮಂಡ್ಯ:

ಇತ್ತೀಚೆಗೆ ಪುಡಿ ರೌಡಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದು. ಇದೀಗ ಯುವತಿಯೊಬ್ಬಳ ವಿಚಾರಕ್ಕಾಗಿ ಅಪ್ರಾಪ್ತ ಯುವಕರ ಗುಂಪೊಂದು ಸೇರಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಮವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯದಲ್ಲಿ ಐಟಿಐ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಟಿ ನರಸೀಪುರ ಮೂಲದ 19 ವರ್ಷದ ಯುವಕನಿಗೆ ಸುಮಾರು ಏಳೆಂಟು ಜನ ಅಪ್ರಾಪ್ತ ಯುವಕರು ಸೇರಿ ಯುವತಿಯ ವಿಚಾರಕ್ಕಾಗಿ ಮಂಡ್ಯ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಯುವಕ ಎಷ್ಟೇ ಬೇಡಿಕೊಂಡರೂ ಬಿಡದೇ ಲಾಂಗ್‌ ನಿಂದ ಹಲ್ಲೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಸೋಷಿಯಲ್‌ ಮೀಡಿಯಾದಲ್ಲಿ ಲೈವ್‌ ಹೋಗಿ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಪುಂಡಾಟ ಮೆರೆದಿದ್ದಾರೆ. 

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಮಂಡ್ಯದ ಪೂರ್ವ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ಇನ್ನುಳಿದ ಯುವಕರಿಗಾಗಿ ಪತ್ತೆ ಹಚ್ಚುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಸಂತ್ರಸ್ತ ಯುವಕ ದೂರು ನೀಡಲು ಹಿಂದೇಟು ಹಾಕಿದ್ದಾನೆ.

 

 

Author:

share
No Reviews