KITCHEN: ಸಿಂಪಲ್‌ ಆಗಿ ಮಾಡಿ ಮಶ್ರೂಮ್‌ ಗ್ರೇವಿ

ಮಶ್ರೂಮ್‌ ಮಸಾಲಾ

ಮಶ್ರೂಮ್​ನಲ್ಲಿ ನಾನಾ ರೀತಿಯ ವೆರೈಟಿ ಟೇಸ್ಟಿ ಫುಡ್​ಗಳಿದೆ. ಎಲ್ಲಾ ರೀತಿಯ ಮಶ್ರೂಮ್​ಗಳು ಕೂಡ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಾಂಶವನ್ನು ಹೊಂದಿರುತ್ತವೆ. ಫೈಬರ್​​ನಲ್ಲಿಯೂ ಸಮೃದ್ಧವಾಗಿವೆ. ಅಣಬೆಗಳು ಪ್ರೋಟೀನ್‌ಗಳು, ವಿಟಮಿನ್ ಸಿ, ಬಿ ಮತ್ತು ಡಿ,  ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್,ಫೈಟೊಕೆಮಿಕಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಇತರ ಪೋಷಕಾಂಶಗಳಿಂದ ಕೂಡಿರುತ್ತದೆ.

ಬೇಕಾಗುವ ಸಾಮಗ್ರಿಗಳು

*ಈರುಳ್ಳಿ - 2

*ಟೊಮ್ಯಾಟೋ - 2

*ಅರಿಶಿನ ಪುಡಿ - 1/4 ಚಮಚ

*ಕೊತ್ತಂಬರಿ ಬೀಜಗಳು – 1 ಚಮಚ

*ಜೀರಿಗೆ - 3/4 ಚಮಚ

*ಸೋಂಪು - 1/2 ಚಮಚ

*ಚಕ್ಕೆ- 2 ಇಂಚಿನ ತುಂಡು

*ಲವಂಗ - 2

*ಏಲಕ್ಕಿ - 2

*ಒಣ ಮೆಣಸಿನಕಾಯಿ –

*ತೆಂಗಿನಕಾಯಿ - ಸ್ವಲ್ಪ

*ಎಣ್ಣೆ

*ಉಪ್ಪು

*ಕರಿಬೇವು

*ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಮೊದಲು ಈರುಳ್ಳಿ ಮತ್ತು ಟೊಮೆಟೋವನ್ನು ಸಣ್ಣದಾಗಿ ಕತ್ತರಿಸಿ. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಜೀರಿಗೆ, ಚಕ್ಕೆ, ಲವಂಗ, ಸೋಂಪು, ಏಲಕ್ಕಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಮತ್ತು ಒಣ  ಮೆಣಸಿನಕಾಯಿ ಹಾಕಿ.  ಜೊತೆಗೆ ಟೊಮೆಟೋ ಸೇರಿಸಿ, ಎಲ್ಲವನ್ನೂ ಹುರಿಯಿರಿ. ಟೊಮೆಟೋ ಚೆನ್ನಾಗಿ ಬೆಂದ ನಂತರ ತೆಂಗಿನ ತುರಿ ಹಾಕಿ. 

ಎಲ್ಲವೂ ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ನುಣ್ಣಗೆ ಆಗುವಂತೆ ರುಬ್ಬಿಕೊಳ್ಳಿ. ಬಳಿಕ ಮಶ್ರೂಮ್‌ ಅನ್ನು ಚೆನ್ನಗಿ ತೊಳೆದುಒಣಗಿಸಿ.ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ ಹಾಕಿ ಅದಕ್ಕೆ ಈರುಳ್ಳಿ, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ನಂತರ ರುಬ್ಬಿದ ಮಸಾಲಾ, ಅರಿಶಿನ ಪುಡಿ, ಉಪ್ಪು ಮತ್ತು ಅಗತ್ಯ ಪ್ರಮಾಣದ ನೀರನ್ನು ಸೇರಿಸಿ ಕುದಿಯಲು ಬಿಡಿ. 

ಗ್ರೇವಿ ಚೆನ್ನಾಗಿ ಕುದಿಯುತ್ತಿರುವಾಗ ಮಶ್ರೂಮ್ ತುಂಡುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸ್ಟವ್ ಇಡಿ. ಗ್ರೇವಿ ಬೆಯ್ಯುತ್ತಿದ್ದಂತೆಯೇ ಎಣ್ಣೆ ಬೇರ್ಪಡಲು ಪ್ರಾರಂಭವಾಗುತ್ತದೆ.ಕೊತ್ತಂಬರಿ ಸೊಪ್ಪನ್ನು ಉದುರಿಸಿ ಮತ್ತು ಒಲೆಯಿಂದ ಕೆಳಗಿಳಿಸಿ. ಮಶ್ರೂಮ್ ಗ್ರೇವಿ ಸವಿಯಲು ಸಿದ್ಧ.

Author:

...
Sub Editor

ManyaSoft Admin

Ads in Post
share
No Reviews