KITCHEN : ರುಚಿಕರವಾದ ಹಣಬೆ ಫ್ರೈ ಒಮ್ಮೆ ಮಾಡಿ ನೋಡಿ

ಮಶ್ರೂಮ್‌ ಫ್ರೈ
ಮಶ್ರೂಮ್‌ ಫ್ರೈ
ಆರೋಗ್ಯ-ಜೀವನ ಶೈಲಿ

ಮಶ್ರೂಮ್‌ ಫ್ರೈ ರೆಸಿಪಿ

 

ಬೇಕಾಗುವ ಸಾಮಗ್ರಿಗಳು:

*ಮಶ್ರೂಮ್- 1 ಬಟ್ಟಲು

*ಶುಂಠಿ- ಸ್ವಲ್ಪ

*ಹಸಿ ಮೆಣಸಿನಕಾಯಿ-6

*ಬೆಳ್ಳುಳ್ಳಿ-7 ಎಸಳು

*ಮೆಣಸಿನಕಾಯಿ ಪುಡಿ- 1 ಚಮಚ

*ಅರಿಶಿನ ಪುಡಿ- ಅರ್ಧ ಚಮಚ

*ಗರಂ ಮಸಾಲ-1 ಚಮಚ

*ಕಾಳುಮೆಣಸಿನ ಪುಡಿ- ಅರ್ಧ ಚಮಚ

*ಈರುಳ್ಳಿ -1

*ಟೊಮಾಟೊ- 2

*ಉಪ್ಪು- ರುಚಿಗೆ ತಕ್ಕಷ್ಟು

*ಎಣ್ಣೆ- ಸ್ವಲ್ಪ

*ಕರಿಬೇವು- ಸ್ವಲ್ಪ

 

ಮಾಡುವ ವಿಧಾನ:

ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಒಂದು ಪಾನ್ ಗೆ ಎಣ್ಣೆ ಹಾಕಿ ಕಾದ ನಂತರ ರುಬ್ಬಿಕೊಂಡಿರುವ ಪೇಸ್ಟ್ ಹಾಕಿ 2 ನಿಮಿಷ ಕೈಯಾಡಿಸಿ. ನಂತರ ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಈರುಳ್ಳಿ, ಟೊಮೆಟೊ  ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ ಕೆಂಪಗಾಗುವ ತನಕ ಹುರಿಯಿರಿ. ಬಳಿಕ ಸ್ವಲ್ಪ ನೀರು ಹಾಕಿ ಕುದಿಸಿ  ಬಳಿಕ  ರುಚಿಗೆ ತಕ್ಕಷ್ಟು ಉಪ್ಪು ಹಾಕಿ.ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಮಶ್ರೂಮ್ ಹಾಕಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾದ ನಂತರ ಇಳಿಸಿ.  ರುಚಿಕರವಾದ ಮಶ್ರೂಮ್ ಫ್ರೈ ಸವಿಯಲು ಸಿದ್ಧ.

 

 

Author:

...
Sub Editor

ManyaSoft Admin

share
No Reviews