ಮಹಾಕುಂಭಮೇಳ:
144 ವರ್ಷಗಳ ನಂತರ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಜನವರಿ 13 ರಿಂದ ಫೆಬ್ರವರಿ 14ರವರೆಗೂ ಮಹಾಕುಂಭದಲ್ಲಿ ಸ್ನಾನ ಮಾಡುವವರ ಸಂಖ್ಯೆ 50 ಕೋಟಿ ದಾಟಿದೆ. ಮೆಕ್ಕಾಗೆ ಭೇಟಿ ನೀಡುವ ಜನರಿಗಿಂತ ಹೆಚ್ಚಿನ ಜನರು ಮಹಾಕುಂಭಮೇಳಕ್ಕೆ ಸೇರುತ್ತಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳದ ಸಂಭ್ರಮ ಕಳೆಗಟ್ಟಿದ್ದು. ಸನಾತನ ಧರ್ಮದ ಅತಿದೊಡ್ಡ ಸಮಾಗಮವಾಗಿ ಪ್ರಯಾಗ್ರಾಜ್ ಮಹಾಕುಂಭಮೇಳ ಹೊಸ ದಾಖಲೆಯನ್ನೇ ಬರೆದಿದೆ. ಕುಂಭಮೇಳದ ಪ್ರಯುಕ್ತ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾದಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. 50 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿರುವ ದಾಖಲೆ ಸೃಷ್ಟಿಯಾಗಿದೆ. ಪ್ರಯಾಗ್ರಾಜ್ನಲ್ಲಿ ಸಾಧು ಸಂತರ ಅಪೂರ್ವ ಸಂಗಮ ಕೋಟ್ಯಾಂತರ ಭಕ್ತರ ಸಮಾಗಮದಿಂದ ಗಂಗಾನದಿ ತೀರದಲ್ಲಿ ದೃಶ್ಯ ಕಾವ್ಯ ಕಳೆಗಟ್ಟಿದೆ.
ದೇಶದ ಮೂಲೆ ಮೂಲೆಯಿಂದ ಮಹಾಕುಂಭ ಮೇಳಕ್ಕೆ ಭಕ್ತರು ಭೇಟಿ ನೀಡುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು ಶಿವನ ಜಪ ಮಾಡಿ ಪುನೀತರಾಗ್ತಿದ್ದಾರೆ. ಅಚ್ಚರಿ ಏನೆಂದರೆ ಜನವರಿ 13ರಂದು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇನ್ನೂ 13 ದಿನಗಳ ಕಾಲ ಮಹಾಕುಂಭಮೇಳದ ಸಂಭ್ರಮ ಬಾಕಿ ಇದ್ದು ಮತ್ತೆಷ್ಟು ಭಕ್ತರು ಭಾಗಿಯಾಗಲಿದ್ದಾರೆ ಎಂದು ಕಾದುನೋಡಬೇಕಿದೆ.