ಶಿರಾ: ಅದ್ದೂರಿಯಾಗಿ ಜರುಗಿದ ಮಾಗೋಡು ರಂಗನಾಥ ಸ್ವಾಮಿಯ ಹೂವಿನ ರಥೋತ್ಸವ

ಹೂವಿನ ರಥೋತ್ಸವ ನಡೆದಿರುವುದು.
ಹೂವಿನ ರಥೋತ್ಸವ ನಡೆದಿರುವುದು.
ತುಮಕೂರು

ಶಿರಾ:

ಶಿರಾ ತಾಲ್ಲೂಕಿನ ಮಾಗೋಡು ಕಂಬದ ರಂಗನಾಥ ಸ್ವಾಮಿ ಹೂವಿನ ರಥೋತ್ಸವ ಇಂದು ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ಮಾಗೋಡು ಕಂಬದ ರಂಗನಾಥ ದೇವರಿಗೆ ಹೂವೇ ಪ್ರಿಯವಾದ ವಸ್ತುವಾಗಿದ್ದು, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹೂವಿನ ತುಲಭಾರ ಮಾಡಿಸುತ್ತೇನೆಂದು ಹರಕೆ ಕಟ್ಟಿಕೊಂಡಿದ್ದು, ಇಷ್ಟಾರ್ಥ ಸಿದ್ದಿ ಬಳಿಕ ಜಾತ್ರೆಯಂದು ಹೂವಿನ ಹರಕೆಯನ್ನು ತೀರಿಸುವುದು ಇಲ್ಲಿನ ವಾಡಿಕೆಯಾಗಿದೆ.

ಇನ್ನು ಈ ಜಾತ್ರೆ ರಥೋತ್ಸವ ನೋಡಲು ಆಂಧ್ರಪ್ರದೇಶ ಸೇರಿದಂತೆ ನಾನಾ ಜಿಲ್ಲೆಗಳಲ್ಲದೇ, ಅಕ್ಕಪಕ್ಕದ ರಾಜ್ಯದ ಭಕ್ತರು ಆಗಮಿಸಿ, ಭಕ್ತಿಯಲ್ಲಿ ಮಿಂದೇಳುತ್ತಾರೆ. ಜಾತ್ರೆಯ ಅಂಗವಾಗಿ ರಥಕ್ಕೆ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು, ರಥ ಎಳೆಯುತ್ತಿದ್ದಂತೆ ಬಾಳೆಹಣ್ಣು, ದವನವನ್ನು ರಥದ ಕಳಸಕ್ಕೆ ಎಸೆದು ಇಷ್ಟಾರ್ಥ ಕೋರುತ್ತಾರೆ. 

Author:

share
No Reviews