ಮಧುಗಿರಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಮಧುಗಿರಿ ತಾಲೂಕಿನ ಸಿದ್ದಾಪುರ ಕೆರೆಯಲ್ಲಿ ನಡೆದಿದೆ
ಮೃತರು ಮಧುಗಿರಿ ಪಟ್ಟಣದ ದೊಡ್ಡಪೇಟೆ ಫಸ್ಟ್ ಬ್ಲಾಕ್ ನಲ್ಲಿ ವಾಸವಾಗಿದ್ದರು ಮೃತ ಹಸೀನಾ ತಾಜ್ಪತಿ ವೆಲ್ಡಿಂಗ್ ಶಾಪ್ ನಟಿಸುತ್ತಿದ್ದರು ಎನ್ನಲಾಗಿದೆ, ಗಂಡ ಹೆಂಡತಿ ನಡುವೆ ಪದೇಪದೇ ಗಲಾಟೆ ನಡೆಯುತ್ತಿದ್ದ ಕಾರಣ ಇಬ್ಬರು ಮಕ್ಕಳ ಜೊತೆ ತಾಯಿ ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ ಸ್ಥಳಕ್ಕೆ ಕೂಡಲೇ ಮದುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಈ ಘಟನೆ ಸಂಬಂಧಪಟ್ಟ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ