ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯ್ತಿ ಮುಂದೆ ನಿನ್ನೆ ಭಟ್ಟಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.. ಗ್ರಾಮಕ್ಕೆ ಸರಿಯಾದ ರಸ್ತೆ ಸೇರಿ ಮೂಲಭೂತ ಸೌಕರ್ಯದ ಕೊರತೆ ಇದ್ದು ಗ್ರಾಮಸ್ಥರು, ವಿದ್ಯಾರ್ಥಿಗಳು ಪರದಾಡುವಂತಾಗಿತ್ತು… ಈ ಬಗ್ಗೆ ಹಲವು ಬಾರಿ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ರು ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ.. ಹೀಗಾಗಿ ಭಟ್ಟಗೆರೆ ಗ್ರಾಮಸ್ಥರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ರು.
ಇನ್ನು ಈ ಬಗ್ಗೆ ನಿಮಮ ಪ್ರಜಾಶಕ್ತಿ ಧ್ವನಿ ಎತ್ತಿದ್ದು, ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿತ್ತು.. ಸುದ್ದಿ ಮಾಡಿ ಕೆಲವೇ ಗಂಟೆಗಳಲ್ಲಿ ಭಟ್ಟಗೆರೆ ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು ಕ್ರಮ ಕೈಗೊಂಡ್ರು. ಗ್ರಾಮದಲ್ಲಿ ಸ್ವಚ್ಛತೆ ಕ್ರಮ, ಸರ್ವೇ ಕಾರ್ಯ ಆರಂಭಿಸಿದ್ದು ಸೂಕ್ತ ರಸ್ತೆ ಕಲ್ಪಿಸುವ ಭರವಸೆಯನ್ನು ಪಿಡಿಒ ರವಿಚಂದ್ರ ನೀಡಿದ್ರು. ಅದೆಷ್ಟೋ ಬಾರಿ ಗ್ರಾಮಸ್ಥರು ಮನವಿ ಮಾಡಿದ್ರು ರಸ್ತೆ ಒದಗಿಸುವಲ್ಲಿ ಹಿಂದೇಟು ಹಾಕಿದ ಅಧಿಕಾರಿಗಳು ಪ್ರಜಾಶಕ್ತಿ ಟಿವಿ ವರದಿ ಮಾಡುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಕ್ರಮ ಕೈಗೊಂಡಿದ್ದಾರೆ… ಇದ್ರಿಂದ ಗ್ರಾಮಸ್ಥರಲ್ಲಿ ನೆಮ್ಮದಿ ಮೂಡಿದ್ದು ಪ್ರಜಾಶಕ್ತಿ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ,