ವಿಶೇಷಚೇತನರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ವಿಕಲಚೇತನರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ವಿಶೇಷಚೇತನರಿಗೆ ಮಾಸಾಶನವನ್ನು ಹೆಚ್ಚಿಸುವ ಕುರಿತು, ಬಸ್ ಪಾಸ್ ವ್ಯವಸ್ಥೆ ಸೇರಿ ಹಲವು ಬೇಡಿಕೆಗಳನ್ನು ಉಪವಿಭಾಗಾಧಿರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯ್ತು. ಮುಂದಿನ ತಿಂಗಳು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್‌ನಲ್ಲಿ ವಿಕಲಚೇತನರ ಮಾಸಾಶನವನ್ನು ಹೆಚ್ಚಳ ಮಾಡಲೇಬೇಕೆಂದು ಎಂದು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದ್ರು
ಈ ವೇಳೆ ಮಾತನಾಡಿದ ವಿಕಲಚೇತನರ ತಾಲೂಕು ಒಕ್ಕೂಟದ ಅಧ್ಯಕ್ಷ ಹನುಮಂತರಾಯ, ವಿಶೇಷಚೇತನರಿಗೆ 1500 ಮಾಸಾಶನ ಬರ್ತಾ ಇದದು, ಆ ದುಡ್ಡಲ್ಲಿ ಜೀವನ ನಿರ್ವಹಣೆ ಸಾದ್ಯವಾಗ್ತಿಲ್ಲ… ಹೀಗಾಗಿ ನಮಗೆ ವಾಸಾಶಸನವನ್ನು 3 ಸಾವಿರಕ್ಕೆ ಹೆಚ್ಚಿಸಬೇಕು ಎಂದ್ರ ಒತ್ತಾಯಿಸಿದ್ರು. ಅಲ್ದೇ ವಿಶೇಷ ಚೇತನರಿಗೆ ನಿವೇಶನ ಕೊಡಿಸುವ ಕುರಿತು ಹಾಗೂ ಗ್ಯಾರಂಟಿ ಯೋಜನೆ ಯಡಿ ರಿಯಾಯಿತಿ ಬಸ್ ಪಾಸ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ರು