ಮಧುಗಿರಿ: ಓಮ್ನಿ ಕಾರು ಪಲ್ಟಿ.. ಕಾರು ಚಾಲಕನಿಗೆ ಗಾಯ

ಓಮ್ನಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ
ಓಮ್ನಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ
ತುಮಕೂರು

ಮಧುಗಿರಿ:

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ರತಪುತ್ರ ಪಾಳ್ಯ ಗೇಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಕಂಬಿಯನ್ನು ತೆಗೆದುಕೊಂಡು ಹೋಗ್ತಿದ್ದ ವೇಳೆ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರಿನ ಮುಂಭಾಗಕ್ಕೆ ಕಂಬಿ ತಗುಲಿದ ಪರಿಣಾಮ ಓಮ್ನಿ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಇನ್ನು ಘಟನೆಯಲ್ಲಿ ಓಮ್ನಿ ಕಾರು ಚಾಲಕ ಸಿದ್ದಾಪುರ ಗ್ರಾಮದ 21 ವರ್ಷದ ಅಂಜನಮೂರ್ತಿಗೆ ಅಪಘಾತದಲ್ಲಿ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲದೇ ಓಮ್ನಿ ಕಾರು ಪಲ್ಟಿಯಿಂದಾಗಿ ಕಾರಿನ ಮುಂಭಾಗದ ಗ್ಲಾಸ್‌ ಫುಲ್‌ ಫೀಸ್‌ ಫೀಸ್‌ ಆಗಿದ್ದು, ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿದ್ದಂತೆ ದ್ವಿಚಕ್ರ ವಾಹನ ಸವಾರ ಬೈಕ್ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಓಮ್ನಿ ಕಾರು ಹಾಗೂ ಬೈಕ್‌ನ್ನು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author:

share
No Reviews