ಮಧುಗಿರಿ : ಮಧುಗಿರಿ ಅಗ್ನಿಶಾಮಕ ಇಲಾಖೆಯಲ್ಲಿ ಜಲವಾಹನದ ಕೊರತೆ

ಜಮೀನಿನಲ್ಲಿ ಬೆಂಕಿ ದುರಂತ ಸಂಭವಿಸಿರುವುದು.
ಜಮೀನಿನಲ್ಲಿ ಬೆಂಕಿ ದುರಂತ ಸಂಭವಿಸಿರುವುದು.
ತುಮಕೂರು

ಮಧುಗಿರಿ:

ಬೇಸಿಗೆ ಇನ್ನೇನು ಆರಂಭವಾಗ್ತಿದೆ. ಎಲ್ಲೆಂದರಲ್ಲಿ ಬೆಂಕಿ ಹೊತ್ತಿಕೊಳ್ಳೊದು, ಕಾಡಿನಲ್ಲಿ ಕಾಡ್ಗಿಚ್ಚು ಶುರುವಾಗಲಿದ್ದು, ಬೆಂಕಿಯ ಕೆನ್ನಾಲಗೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಲಿದೆ. ಮಧುಗಿರಿಯಲ್ಲಿ ವರ್ಷ ಆರಂಭದಲ್ಲೇ ಸುಮಾರು 23 ಆಕಸ್ಮಿಕ ಬೆಂಕಿ ದುರಂತಗಳು ಸಂಭವಿಸಿವೆ. ಬೆಂಕಿ ದುರಂತದಿಂದ ರಕ್ಷಿಸುವ ಹೊಣೆ ಅಗ್ನಿಶಾಮಕ ಇಲಾಖೆಗೆ ಸೇರಿರುತ್ತದೆ. ಆದರೆ ಮಧುಗಿರಿ ತಾಲೂಕಿನ ಅಗ್ನಿಶಾಮಕ ಇಲಾಖೆಯಲ್ಲಿ ಜಲವಾಹನದ ಕೊರತೆಯಿಂದ ಅಗ್ನಿ ಅವಘಡಗಳಿಂದ ನಮ್ಮನ್ನ ರಕ್ಷಣೆ ಮಾಡುವವರು ಯಾರು ಅನ್ನೋ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಮಧುಗಿರಿ ತಾಲೂಕಿನಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಇದ್ದು, ಶಾಶ್ವತ ನೀರಾವರಿ ಯೋಜನೆ ಇಲ್ಲದೇ ಬರಪೀಡಿತ ಪ್ರದೇಶವಾಗಿದೆ, ಹೀಗಾಗಿ ಬೇಸಿಗೆ ವೇಳೆ ಎಲ್ಲೆಂದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ನೀರು ಮತ್ತು ಜಲ ವಾಹನ ಕೊರತೆಯಿಂದ ಬೆಂಕಿ ಅವಘಡ ತಪ್ಪಿಸಲು ಇಲ್ಲಿನ ಸಿಬ್ಬಂದಿ ಸೆಣಸಾಡುವಂತಾಗಿದೆ. ಮಧುಗಿರಿ ಅಗ್ನಿಶಾಮಕ ಇಲಾಖೆಯಲ್ಲಿ ಎರಡು ಫೈರ್‌ ಇಂಜಿನ್‌ ಇದ್ದು, ಅದರಲ್ಲಿ ಒಂದು ವಾಹನ ಕೆಟ್ಟು ಹೋಗಿದ್ದು. ಇರೋ ಒಂದು ಪೈರ್‌ ಇಂಜಿನ್‌ನಲ್ಲಿ ಬೆಂಕಿ ನಂದಿಸುವ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ ಪ್ರತಿ ವರ್ಷ 200 ಕ್ಕೂ ಹೆಚ್ಚು ಬೆಂಕಿ ಅವಘಡಗಳು ಸಂಭವಿಸುತಿದ್ದು. ಎಲ್ಲೆಡೆ ಅಗ್ನಿಶಾಮಕ ಇಲಾಖೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಕೊಡಿಗೇನಹಳ್ಳಿ ಹೋಬಳಿಯ ದಂಡಿಪುರ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಈ ಘಟನೆಯಲ್ಲಿ ಕೆ.ವಿ ಸತೀಶ್‌ ಕುಮಾರ್‌ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ನಿಂಬೆ, ಸೀಬೆ ಕಾಯಿ, ಹುಣಸೆ ಮತ್ತು ಮಾವು ಸೇರಿ ನೀರಿನ ಪೈಪ್‌ಗಳು ಸುಟ್ಟು ಕರಕಲಾಗಿತ್ತು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ 112ಗೆ ಕರೆ ಮಾಡಿದರೆ ಸಂಪರ್ಕ ಸಿಗಲಿಲ್ಲ. ಕೊನೆಗೆ ಫೈರ್‌ ಆಫೀಸರ್‌ಗೆ ಕರೆ ಮಾಡಿದರೆ ಬೇರೆ ಕಡೆ ಇದ್ದರು, ಬರೋದು ತಡ ಆಯ್ತು ಅಷ್ಟರಲ್ಲಿ ಬೆಳೆ ಎಲ್ಲ ನಾಶ ಆಗಿತ್ತು. ಇನ್ನೋಂದು ಫೈರ್‌ ಇಂಜಿನ್‌ ವಾಹನ ಇದ್ದಿದ್ದರೆ ನಮ್ಮ ಬೆಳೆ ಉಳಿಯುತ್ತಿತ್ತು ಎಂದು ರೈತ ಸತೀಶ್‌ ಕಣ್ಣೀರು ಹಾಕಿದರು.

ಇಲ್ಲಿಯ ಅಗ್ನಿಶಾಮಕ ಇಲಾಖೆಯಲ್ಲಿ 10 ಹುದ್ದೆಗಳು ಖಾಲಿ ಇದ್ದು, ಕೆಲಸ ಮಾಡುವ ಸಿಬ್ಬಂದಿಯ ಕೊರತೆ ಹಾಗೂ ಫೈರ್‌ ಇಂಜಿನ್‌ ಗಾಡಿ ಕೊರತೆ ಇದೆ. ಕಳೆದ ಒಂದು ತಿಂಗಳಲ್ಲಿ ಮಧುಗಿರಿಯಲ್ಲಿ 35 ಅಗ್ನಿ ದುರಂತ ಸಂಭವಿಸಿದೆ. ಎಂದು ಕರೆ ಬಂದಿದ್ದು, 22 ಕಡೆಗೆ ಮಾತ್ರ ತೆರಳಿ ಬೆಂಕಿ ನಂದಿಸಲಾಗಿದೆಯಂತೆ. ಉಳಿದ 13 ಕಡೆ ತೆರಳಿ ಅಗ್ನಿ ನಂದಿಸುವ ಕೆಲಸ ಮಾಡಲಾಗಿಲ್ಲ. ಹೀಗಾಗಿ ಈ ಬಾರಿ ಬೇಸಿಗೆ ಹೆಚ್ಚಾಗಿದ್ದು ಅಗ್ನಿ ದುರಂತ ಸಂಭವಿಸದಂತೆ ಜನರು ಜಾಗೃತಿ ವಹಿಸಬೇಕು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ಇನ್ನೇನು ಎರಡು ತಿಂಗಳಲ್ಲಿ ಬೇಸಿಗೆ ಆರಂಭವಾಗಲಿದ್ದು ಬೆಂಕಿ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಧುಗಿರಿ ತಾಲೂಕಿಗೆ ಇನ್ನೊಂದು ಅಗ್ನಿಶಾಮಕ ವಾಹನದ ಅಗತ್ಯವಿದ್ದು ಸರ್ಕಾರ ಕೂಡಲೇ ತಾಲೂಕಿಗೆ ಅಗ್ನಿಶಾಮಕ ವಾಹನದ ಜೊತೆಗೆ ಸಿಬ್ಬಂದಿಯನ್ನು ನೇಮಿಸಿಕೊಂಡು ಜನರನ್ನು ರಕ್ಷಣೆ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews