ಮಧುಗಿರಿ:
ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಎನ್ ಬಾಬು ಹುಟ್ಟು ಹಬ್ಬದ ಅಂಗವಾಗಿ ಆರೋಗ್ಯ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಡಾ ಹರಿಣಿ, ಡಾ ಚೇತನಯ್ಯ, ಡಾ.ಸಾಧಿಕ ಮುಖ್ಯ ಶಿಕ್ಷಕ ಶಿವಪ್ಪ, ಎಸ್ಸಿಎಂಡಿಸಿ ಮಾಜಿ ಅಧ್ಯಕ್ಷ ಶಿವಶಂಕರ್, ನಾಗರಾಜು, ಆದಿನಾರಾಯಣ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಅನೇಕ ಮಂದಿ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ವೇಳೆ ಮಾತನಾಡಿದ ಡಾ.ಶೇಖರ್, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯ ಜೀವನ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಆರೋಗ್ಯವಾಗಿದ್ದರೆ ಸುಖವಾಗಿ ಜೀವನ ಮಾಡಲು ಸಾಧ್ಯ ಇಲ್ಲದಿದ್ದರೆ ದುಡಿಮೆಯ ಸಂಪೂರ್ಣ ಹಣವನ್ನು ಅಸ್ಪತ್ರೆಗೆ ಇಡಬೇಕಾಗುತ್ತದೆ. ಆಗ್ಗಾಗ್ಗೆ ವೈದ್ಯರ ಸಲಹೆ ಹಾಗೂ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಎಸ್.ಎನ್ ಬಾಬು ಮಾತನಾಡಿ, ಹುಟ್ಟು ಹಬ್ಬವನ್ನು ಆಡಂಬರದ ಅಚರಣೆ ಮಾಡುವ ಬದಲು ನಮ್ಮ ಗ್ರಾಮದಲ್ಲಿ ಅರೋಗ್ಯ ತಪಾಸಣೆ ಮಾಡಿಸುವುದು ಹಾಗೂ ಅಸಹಾಯಕರಿಗೆ ನೆರವಾಗುವ ನಿಟ್ಟಿನಲ್ಲಿ ಇಂತಹ ಕೆಲಸವನ್ನು ಮಾಡಬೇಕು ಎಂದರು. ಕಾಂಗ್ರೆಸ್ ಪಕ್ಷ ನನಗೆ ಉತ್ತಮ ಸ್ಥಾನ ಮಾನ ನೀಡಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ರಾಜಕೀಯದಲ್ಲಿ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದರು.