ಗ್ರಾಮ ಸಭೆತುಮಕೂರು
ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯತಿಯ ಕಾರೇನಹಳ್ಳಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಈ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಶಿವಕುಮಾರ್ ತಿಳಿಸಿದರು.
ಗ್ರಾಮದಲ್ಲಿ ನಡೆದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯ ಅರ್ಜಿ ಸ್ವೀಕಾರ ಹಾಗೂ ಗ್ರಾಮ ಸಭೆಯಲ್ಲಿ ಮಾತನಾಡಿದ ಪಿಡಿಓ ಶಿವಕುಮಾರ್ ಗ್ರಾಮ ಪಂಚಾಯತಿ ವತಿಯಿಂದ ಗುರುತಿಸಿರುವ ನಿವೇಶನಗಳಲ್ಲಿ 3 ನಿವೇಶನಗಳನ್ನು ಮೀಸಲಿಟ್ಟಿದ್ದು, 27 ನಿವೇಶನಗಳನ್ನು ಮೀಸಲಾತಿ ಅನುಸಾರ ಹಂಚಿಕೆ ಮಾಡಲಾಗುವುದು ಮತ್ತು ಒಂದೂವರೆ ಎಕರೆ ಜಾಗವನ್ನು ಮೀಸಲಿಟ್ಟಿದ್ದು ಅಗತ್ಯ ಬಿದ್ದರೆ ಇದರಲ್ಲಿ ನಿವೇಶನಗಳನ್ನು ನೀಡಲಾಗುವುದು. ಹಿರಿಯ ನಾಗರೀಕರಿಗೆ, ಎಸ್ಸಿ ,ಎಸ್ಟಿ ,ಓಬಿಸಿಗೆ ಮೀಸಲಾತಿಯಂತೆ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು ಎಂದರು. ಈ ಸೌಲಭ್ಯ ಪಡೆಯಲು ಸ್ಥಳೀಯ ನಿವಾಸಿಯಾಗಿರಬೇಕು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸಹಕಾರಿ ಸಚಿವರ ದೂರ ದೃಷ್ಟಿಯಿಂದ ಇಂತಹ ಕಾರ್ಯಕ್ರಮವನ್ನು ರೂಪಿಸಿದ್ದು ಇದನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು ಎಂದರು.
ಈ ಸಂರ್ದಭದಲ್ಲಿ ನೋಡಲ್ ಅಧಿಕಾರಿ ರಾಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ನಾಗರಾಜು, ಮಾಜಿ ಅಧ್ಯಕ್ಷ ರವಿ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ನಾಗರಾಜು ಹಾಗೂ ಮುಖಂಡರು ಉಪಸ್ಥಿತರಿದ್ದರು.