ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮತುಮಕೂರು
ಕೊರಟಗೆರೆ :
ಕೊರಟಗೆರೆ ತಾಲೂಕು ತುಂಬುಗಾನಹಳ್ಳಿ ಬಳಿಯ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಪದಕ ಪ್ರಧಾನ ಮಾಡಲಾಯಿತು. ಮುಖ್ಯ ಕಮಂಡೆಂಟ್ ಹಂಜಾ ಹುಸೇನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಉಪ ಆಯುಕ್ತ ಮಹಮ್ಮದ್ ರಫಿ ಭಾಷ, ಸಹಾಯಕ ಕಮಾಂಡೆಂಟ್ ನವೀನ್ ಕುಮಾರ್, ಫಾರೆಸ್ಟ್ ಆಫೀಸರ್ ರಘುನಂದನ್ ಭಾಗಿಯಾಗಿದ್ದರು. ಈ ವೇಳೆ ಪೊಲೀಸ್ ಇಲಾಖೆಯ ಶಿಸ್ತಿನ ಸಿಪಾಯಿಗಳಿಗೆ ಪದಕಗಳನ್ನು ನೀಡುವ ಮೂಲಕ ಗೌರವ ಅರ್ಪಿಸಿದರು.
ಈ ವೇಳೆ ಮಾತನಾಡಿದ ಮುಖ್ಯ ಕಮಂಡೆಂಟ್ ಹಂಜಾ ಹುಸೇನ್, ಪೊಲೀಸ್ ಸಿಬ್ಬಂದಿಗಳೆಂದರೆ ವರ್ಷದ 365 ದಿನಗಳಲ್ಲಿ 24 ಗಂಟೆಯೂ ಕೆಲಸ ಮಾಡುವ, ದೇಶದ ಗಡಿ ಕಾಯುವ ಸೈನಿಕರು ಎಷ್ಟು ಮುಖ್ಯವೋ ದೇಶದ ಒಳಗಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳು ಅಷ್ಟೇ ಮುಖ್ಯ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತಮ್ಮ ಮಕ್ಕಳಿಗೆ ಅತಿ ಹೆಚ್ಚು ವಿದ್ಯಾಭ್ಯಾಸದ ಕಡೆ ಗಮನ ಕೊಡಿ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ತುಮಕೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪದಕ ಪ್ರಧಾನ ಹಾಗೂ ಕರ್ತವ್ಯ ಕೂಟದ ಪ್ರಶಂಸನಾ ಪತ್ರ ನೀಡಿರುವುದು ಹೆಮ್ಮೆಯ ವಿಚಾರ. ಪೊಲೀಸರು ಕರ್ತವ್ಯ ಜೊತೆಯಲ್ಲಿ ಆರೋಗ್ಯದ ಕಡೆಯು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದರು.