ಲಾರಿ ಹಾಗೂ ಕ್ರೂಸರ್ ವಾಹನತುಮಕೂರು
ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಎಮ್ಮೇರಹಳ್ಳಿ ಗ್ರಾಮದ ಬಳಿ ಭಾನುವಾರ ಬೆಳಗಿನ ಜಾವ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಇಬ್ಬರು ಮೃತ ಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ.
ದುಡಿಯುವ ಕೈಗೆ ಕೆಲಸವಿಲ್ಲದ್ದರಿಂದ ಉದ್ಯೋಗ ಅರಸಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಿರೇಬಾದರದಿನ್ನಿ ಗ್ರಾಮದಿಂದ ಆರು ಜನರು ಉದ್ಯೋಗಕ್ಕಾಗಿ ಬೆಂಗಳೂರು ಕಡೆ ಗುಳೆ ಹೊರಟ್ಟಿದ್ದಾಗ ಬೆಳಗಿನ ಜಾವ ಮುಂದೆ ಸಾಗುತ್ತಿದ್ದ ಲಾರಿಗೆ ವೇಗದಲ್ಲಿದ್ದ ಕ್ರೂಸರ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಕ್ರೂಸರ್ ವಾಹನ ಚಾಲಕ ಬಸವರಾಜು (48)ಹಾಗೂ ಸುರೇಶ್ (28) ಎಂಬುವರು ಮೃತಪಟ್ಟಿದ್ದು, ಆನಂದ್, ವಿರೇಶ್, ನಾಗಮ್ಮ, ಆದೆಪ್ಪರವರು ತೀವ್ರವಾಗಿ ಗಾಯಗೊಂಡಿದ್ದು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.