TURUVEKERE: ಅಮಿತ್ ಶಾ ಅಂಬೇಡ್ಕರ್ ಪ್ರತಿಮೆ ಮುಂದೆ ಮಂಡಿಯೂರಿ ಕ್ಷಮೆ ಕೇಳಲಿ

Turuvekere Pressmeet
Turuvekere Pressmeet
ತುಮಕೂರು

ತುರುವೇಕೆರೆ ಪಟ್ಟಣದಲ್ಲಿ ದಲಿತ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದ ದಲಿತ ಮುಖಂಡರು ಅಮಿತ್‌ ಶಾ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಾಯಸಂದ್ರ ಸುಬ್ರಹ್ಮಣ್ಯ, ಡೊಂಕಿಹಳ್ಳಿ ರಾಮಣ್ಣ, ಮಹದೇವಯ್ಯ, ಪುರ ರಾಮಚಂಧ್ರಯ್ಯ, ತೋವಿನಕರೆ ರಂಗಸ್ವಾಮಿ, ಕುಣಿಕೇನಹಳ್ಳಿ ಲೋಕೇಶ್, ಪ್ರಸನ್ನಕುಮಾರ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ, . ಅಮಿತ್ ಶಾ ರವರು ಕೂಡಲೇ ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮಾಪಣೆ ಕೇಳಬೇಕೆಂದು ಎಂದು ಆಗ್ರಹಿಸಿದ್ರು. ಅಲ್ದೇ ಅಂಬೇಡ್ಕರ್ ರವರು ಭಾರತ ರತ್ನವಾಗಿದ್ದಾರೆ. ಅಂತಹವರ ಬಗ್ಗೆ ಲಘು ಮಾತನಾಡಿರುವುದನ್ನು ಇಡೀ ದೇಶವೇ ಖಂಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.

‌ಇನ್ನು ರಾಜ್ಯದ ದಲಿತ ಸಮುದಾಯಕ್ಕೆ ಸೇರಿರುವ ಪ್ರಿಯಾಂಕ ಖರ್ಗೆಯವರನ್ನು ಟಾರ್ಗೆಟ್ ಮಾಡಿರುವ ಕೋಮುವಾದಿ ಬಿಜೆಪಿಯವರ ಪಿತೂರಿಯನ್ನು ಹೋರಾಟದ ಮೂಲಕವೇ ಬಗ್ಗು ಬಡಿಯಲು ರಾಜ್ಯದ ದಲಿತರು ಸಿದ್ಧರಾಗಿದ್ದಾರೆ ಎಂದ್ರು.

Author:

share
No Reviews