ಕೊರಟಗೆರೆ:
ಸಂಜೀವಿನಿ ಪರ್ವತ, ದಿವ್ಯ ಔಷಧಿಗಳ ಕ್ಷೇತ್ರ, ಸಿದ್ದರ ತಪೋವನ, ಸಾಧು ಸಂತರ ತವರೂರು ಎಂದೇ ಪ್ರಖ್ಯಾತಿ ಪಡೆದಿರೋ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟ ಕ್ಷೇತ್ರ. ಈ ತಪೋಕ್ಷೇತ್ರಕ್ಕೆ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರ್ತಾರೆ. ಆದರೆ ಈ ಕ್ಷೇತ್ರದಲ್ಲಿ ಪ್ರವಾಸಿಗರಿಗೆ, ಭಕ್ತರಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ. ಅಷ್ಟೇ ಅಲ್ಲ ಪಾರ್ಕಿಂಗ್ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲ ಆದರೆ ಪಾರ್ಕಿಂಗ್ ಶುಲ್ಕು ಅಂತಾ ಪ್ರವಾಸಿಗರಿಂದ 20 ರೂಪಾಯಿ ವಸೂಲಿ ಮಾಡ್ತಾರೆ ಆದರೆ ಅವರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡ್ತಾ ಇಲ್ಲ. ಇದರಿಂದ ಪ್ರವಾಸಿಗರ ಕಾರೊಂದಕ್ಕೆ ಹಾನಿಯಾದ ಘಟನೆ ಕೂಡ ಜರುಗಿ ಹೋಗಿದೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾ ಇದ್ದು, ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದ್ದಾವೆ. ಸಿದ್ದರಬೆಟ್ಟ ಕ್ಷೇತ್ರದಲ್ಲಿ ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚು ಉಂಟಾಗಿದ್ದು, ರಸ್ತೆ ಬದಿ ಪಾರ್ಕಿಂಗ್ ಮಾಡಿದ್ದ ಪ್ರವಾಸಿಗರ ಕಾರು ಬೆಂಕಿಯ ತಾಪಕ್ಕೆ ಬೆಂದು ಹೋಗಿದೆ. ಸಿದ್ದೇಶ್ವರ ದರ್ಶನಕ್ಕೆಂದು ಬೆಂಗಳೂರಿನಿಂದ ಪ್ರವಾಸಿಗರು ಬಂದಿದ್ದರು, ಆದರೆ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿ ಪಾರ್ಕಿಂಗ್ ಮಾಡಲಾಗಿತ್ತು. ಆದರೆ ಏಕಾಏಕಿ ಕಾಡ್ಗಿಚ್ಚು ಸಂಭವಿಸಿದ್ದು ಬೆಂಕಿಯ ತಾಪಕ್ಕೆ ಕಾರಿಗೆ ಹಾನಿಯಾಗಿದೆ. ಪಾರ್ಕಿಂಗ್‌ಗೆ ಎಂದು 20 ರೂಪಾಯಿ ಕೂಡ ವಸೂಲಿ ಮಾಡಲಾಗಿದೆ, ಆದರೆ ಹಣ ವಸೂಲಿ ಮಡಿದ್ರು ಕೂಡ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಪ್ರವಾಸೋದ್ಯಮ ಹಾಗೂ ಮುಜುರಾಜಿ ಇಲಾಖೆ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.