ಕೊರಟಗೆರೆ : ಹಾಲು ಉತ್ಪಾದನೆಯಲ್ಲಿ ಕೊರಟಗೆರೆ ನಂ.1 ಸ್ಥಾನಕ್ಕೆ ಏರಬೇಕು

ಹಾಲು ಉತ್ಪಾದಕರ ಸಂಘ ಚನ್ನರಾಯನದುರ್ಗ
ಹಾಲು ಉತ್ಪಾದಕರ ಸಂಘ ಚನ್ನರಾಯನದುರ್ಗ
ತುಮಕೂರು

ಕೊರಟಗೆರೆ : 

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಮುಖಂಡರಾದ ಕಾಮರಾಜು, ರಾಜಣ್ಣ, ಶಿವಕುಮಾರ್, ವಿನಯ್  ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಕೊರಟಗೆರೆ ತಾಲೂಕಿನ KMF ನಿರ್ದೇಶಕ ಸಿದ್ದಗಂಗಯ್ಯ, ಹಾಲು ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿರುವ ಕೊರಟಗೆರೆಯನ್ನು ನಂಬರ್‌ ಒನ್‌ ಸ್ಥಾನಕ್ಕೆ ತರಲು ಹೈನುಗಾರಿಕೆ ರೈತರ ಸಹಕಾರ ಅತಿಮುಖ್ಯ ಎಂದರು. ಕೊರಟಗೆರೆ ತಾಲೂಕಿನ 128 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಡೈರಿಗಳಿವೆ. ಇನ್ನಷ್ಟು ಗ್ರಾಮಗಳಿಗೆ ಡೈರಿಯ ಬೇಡಿಕೆಯಿದ್ದು ತ್ವರಿತವಾಗಿ ನಮ್ಮ‌ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಡೈರಿಗಳನ್ನು ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದರು.

ಅಲ್ಲದೇ ರೈತರಿಗೆ ನೀಡುವ ಪ್ರೋತ್ಸಾಹ ಧನ ಮತ್ತು ಡಿಸಿಸಿ ಬ್ಯಾಂಕಿನಿಂದ ರೈತರಿಗೆ ನೀಡುವ ಲೋನಿನ ಬಗ್ಗೆ ರೈತರಿಂದ ಬೇಡಿಕೆ ಬಂದಿದೆ. ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರ ಜೊತೆಗೂಡಿ ರೈತರಿಗೆ ಅನುಕೂಲ ಮಾಡುವ ಜವಾಬ್ದಾರಿ ನನ್ನದಾಗಿದೆ ಎಂದರು. ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗ್ರಾಮೀಣ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತೇ. ರೈತರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Author:

share
No Reviews