ಕೊರಟಗೆರೆ :
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದ್ದು ಆದರೆ ಕಾರಣ ನೀಡದೇ ಮುಖ್ಯ ಶಿಕ್ಷಕನನ್ನೇ ಸೇವೆಯಿಂದ ಅಮಾನತು ಮಾಡಲಾಗಿದೆ. ಕೊರಟಗೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಶಿಕ್ಷಕರ ಮೇಲೆ ದರ್ಪ ತೋರುತ್ತಿದ್ದು, ವೈಯಕ್ತಿಕ ದ್ವೇಷಕ್ಕೆ ಶಿಕ್ಷಕರಿಗೆ ಅಮಾನತು ಶಿಕ್ಷೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನು ಕೊರಟಗೆರೆ ತಾಲೂಕಿನಲ್ಲೇ 2 ತಿಂಗಳ ಅಂತರದಲ್ಲಿ ಸುಮಾರು 8 ಮಂದಿ ಶಿಕ್ಷಕರನ್ನು ಅಮಾನತು ಮಾಡಲಾಗಿರೋ ಸಂಗತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಬಿಇಒ ಕಚೇರಿಯಲ್ಲಿ ಹಗರಣ, ಅಕ್ರಮ ನಡೆಯುತ್ತಿದ್ದು ಅಕ್ರಮವನ್ನು ಪ್ರಶ್ನಿಸಿದ್ದ ಕೆರೆಯಾಗಲಹಳ್ಳಿ ಗ್ರಾಮದ ಮುಖ್ಯ ಶಿಕ್ಷಕ ದೇವರಾಜಯ್ಯ ಅವರನ್ನು ಕಾರಣ ನೀಡದೇ ಅಮಾನತು ಮಾಡಿದ್ದಾರೆ. ಇನ್ನು ಕೊರಟಗೆರೆಯಲ್ಲಿ ಸಾಲು ಸಾಲು ಶಿಕ್ಷಕಕರ ಅಮಾನತಿಗೆ ಬೇಸತ್ತ ಶಿಕ್ಷಕ ವೃಂದ BEO ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಕೊರಟಗೆರೆ ತಾಲೂಕಿನ ಬಿಇಒ ನಟರಾಜಯ್ಯ ಇಲಾಖೆಯಲ್ಲಿ ಸಾಕಷ್ಟು ಅಕ್ರಮ ಎಸಗಿರುವ ಆರೋಪ ಮಾಡಲಾಗಿದ್ದು, ಅಕ್ರಮಗಳನ್ನು ತನಿಖೆ ನಡೆಸುವಂತೆ ಆಗ್ರಹಿಸಿ ಕೆರೆಯಾಗಲಹಳ್ಳಿಯ ಮುಖ್ಯಶಿಕ್ಷಕ ದೇವರಾಜಯ್ಯ ಲೋಕಾಯಕ್ತಕ್ಕೆ ದೂರು ನೀಡಿದರು. ದೂರು ನೀಡಿದ್ದಕ್ಕೆ, ಲೋಕಾಯುಕ್ತ ತನಿಖೆಗೆ ಹೆದರಿ ಮುಖ್ಯ ಶಿಕ್ಷಕ ದೇವರಾಜಯ್ಯಗೆ ನೋಟಿಸ್ ನೀಡದೇ, ಕಾರಣ ನೀಡದೇ ಏಕಾಏಕಿ ವರ್ಗಾವಣೆ ಶಿಕ್ಷೆ ವಿಧಿಸಿದ್ದಾರೆ. ಇನ್ನು ಕೊರಟಗೆರೆ ತಾಲೂಕಿನಲ್ಲಿ 2 ತಿಂಗಳ ಅಂತರದಲ್ಲಿ ಸುಮಾರು 8 ಮಂದಿ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ. ಶಿಕ್ಷಕರ ಟ್ರಾನ್ಸ್‌ಫರ್‌ನಿಂದ ಬೇಸತ್ತ ಶಿಕ್ಷಕರ ವೃಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಬಿಇಒನನ್ನು ಪ್ರಶ್ನಿಸಿದ್ದಾರೆ. BEO ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಶಿಕ್ಷಕರ ಪ್ರಶ್ನೆಗೆ ಉತ್ತರಿಸಲಾಗದೇ, ನನ್ನ ಕಚೇರಿಯಿಂದ ಎಲ್ಲ ಹೊರ ಹೋಗಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಬಿಇಒ ಕಚೇರಿಗೆ ಮುತ್ತಿಗೆ ಹಾಕಿದ ಮಹಿಳಾ ಶಿಕ್ಷಕರ ಎದುರು ಸೌಜನ್ಯವಿಲ್ಲದೇ ಜಾತಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ಬಿಇಒ ನಟರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಶಿಕ್ಷಕರ ಮೇಲೆ ಪೊಲೀಸರಿಗೆ ದೂರು ನೀಡುವುದಾಗಿ ಪ್ರತಿಭಟನಾ ಶಿಕ್ಷಕರಿಗೆ ಬಿಇಒ ನಟರಾಜ್ ಬೆದರಿಸಿದ್ದಾರೆ. ಬಿಇಓ ದೂರು ನೀಡುವ ಬೆದರಿಕೆ ಖಂಡಿಸಿ ಮಹಿಳಾ ಶಿಕ್ಷಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಬಿಇಓ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿಲ್ಲ, ಯಾವುದೇ ನೋಟಿಸ್ ಇಲ್ಲದೆ ಅಮಾನತು ಮಾಡಿದ್ದಾರೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಿಇಓ ವಿರುದ್ಧ ಪೋಲಿಸ್ ಇಲಾಖೆಗೆ ಮುಖ್ಯ ಶಿಕ್ಷಕ ದೇವರಾಜಯ್ಯ ದೂರು ನೀಡಿದ್ದಾರೆ.
ಕೊರಟಗೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಅವರ ದಬ್ಬಾಳಿಕೆ, ದರ್ಪ ಮಿತಿ ಮೀರಿದೆ. ಕಳೆದ ಬಾರಿ ನಮ್ಮ ಪ್ರಜಾಶಕ್ತಿ ವರದಿಗಾರರ ಮೇಲೆಯೇ ದಬ್ಬಾಳಿಕೆ ತೋರಿದರು. ಇದೀಗ ಶಿಕ್ಷಕರ ಮೇಲೆ ದಬ್ಬಾಳಿಕೆ ಮುಂದುವರೆದಿದ್ದು, ಬಿಇಒ ನಟರಾಜ್ ವಿರುದ್ಧ ತಾಲೂಕಿನಲ್ಲಿ ಆಕ್ರೋಶದ ಕಟ್ಟೆ ಹೊಡೆಯುವ ಮುನ್ನ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.