ಕೊರಟಗೆರೆ : ರಸ್ತೆ ಅಗಲೀಕರಣದ ನೆಪ - ನೂರಾರು ಮರಗಳ ಮಾರಣಹೋಮ

 ಮರಗಳ ಮಾರಣಹೋಮ ನಡೆಸಿರುವುದು
ಮರಗಳ ಮಾರಣಹೋಮ ನಡೆಸಿರುವುದು
ತುಮಕೂರು

ಕೊರಟಗೆರೆ:

ರಸ್ತೆ ಅಗಲೀಕರಣ ನೆಪವೊಡ್ಡಿ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳಿಸಿದ್ದ ನೂರಾರು ಮರಗಳಿಗೆ ಅಧಿಕಾರಿಗಳು ಕೊಡಲಿಪೆಟ್ಟು ಹಾಕ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳ ದಿವ್ಯನಿರ್ಲಕ್ಷದಿಂದ ಜೆಸಿಬಿ, ಇಟಾಚಿ ಮೂಲಕ ಮರಗಳನ್ನು ಕಡಿಯುತ್ತಿದ್ದು, ಪರಿಸರ ನಾಶಕ್ಕೆ ಮುಂದಾಗಿದ್ದಾರೆ.

ಮನೆಗೊಂದು ಮರ, ಊರಿಗೊಂದು ಕಾಡು ಎಂಬ ನಾಣ್ಣುಡಿ ಮಾತಿನಂತೆ, ಮರಗಳು ಇದ್ದರೆ ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತೆ. ಆದರೆ ಇತ್ತೀಚಿನ ದಿನಗಳಲ್ಲಿ ನಾನಾ ಕಾರಣ ನೆಪವೊಡ್ಡಿ ಮರಗಳಿಗೆ ಕೊಡಲಿ ಪೆಟ್ಟು ಹಾಕ್ತಿದ್ದಾರೆ. ಇದರಿಂದ ಅರಣ್ಯ ನಾಶ ಆಗ್ತಾ ಇದ್ದು ಮಳೆಗಾಲಕ್ಕೆ ಮಳೆ ಬಾರದೇ ರೈತರು ಕಂಗಲಾಗುವಂತೆ ಮಾಡಿದೆ. ಇಷ್ಟಾದರೂ ಕೂಡ ಎಚ್ಚೆತ್ತುಕೊಳ್ಳದ ಜನರು ಮರಗಳನ್ನು ನಾಶ ಮಾಡುತ್ತಲೇ ಇದ್ದರೆ. ಹೌದು ಕೊರಟಗೆರೆ ತಾಲೂಕು ಕಸಬಾ ಹೋಬಳಿ ತೀತಾ ಗ್ರಾಮ ಪಂಚಾಯಿತಿಯ ಮಾದವಾರದಿಂದ ಕ್ಯಾಮೇನಹಳ್ಳಿ ಕ್ರಾಸಿನವರೆಗೆ ರಸ್ತೆಯ ಅಗಲೀಕರಣದ ನೆಪದಿಂದ ಹತ್ತಾರು ವರ್ಷದಿಂದ ಬೆಳೆಸಿದ್ದ ನೂರಾರು ಮರಗಳನ್ನು ಅಧಿಕಾರಿಗಳು ಕಡಿಯುತ್ತಿದ್ದಾರೆ.

ರಸ್ತೆ ಅಗಲೀಕರಣ ನೆಪವೊಡ್ಡಿ ಜೆಸಿಬಿ ಮತ್ತು ಇಟಾಚಿಯಿಂದ ರಾತ್ರೋರಾತ್ರಿ ಗಿಡಗಳನ್ನು ನೆಲಕ್ಕೆ ಉರುಳಿಸುತ್ತಿದ್ದು, ಈ ಬಗ್ಗೆ ಪಿಡ್ಲ್ಯೂಡಿ, ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಸ್ಥಳೀಯರು ದೂರವಾಣಿ ಕರೆ ಮಾಡಿದರೇ ಕರೆಗಳನ್ನೇ ಸ್ವೀಕರಿಸದೇ ಅಧಿಕಾರಿಗಳು ದಿವ್ಯನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.

ಪಿಡ್ಲ್ಯೂಡಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ, ಅನುದಾನ ಮತ್ತು ಯಾವ ಇಲಾಖೆಗೆ ಸೇರಿದೇ ಎಂಬುವುದೇ ಇಟಾಚಿ, ಜೆಸಿಬಿ ಚಾಲಕನಿಗೆ ಗೊತ್ತಿಲ್ಲವಂತೆ. ಪವಿತ್ರಪುಣ್ಯ  ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಸಂಪರ್ಕದ ರಸ್ತೆಯಲ್ಲಿ ತೆರಳುವ ಭಕ್ತರಿಗೆ ನೆರಳು ನೀಡುತ್ತಿದ್ದ ಮರಗಿಡಗಳನ್ನು ನಾಶ ಮಾಡಿದ ಗುತ್ತಿಗೆದಾರನ ವಿರುದ್ದ ಭಕ್ತರು ಹಿಡಿಶಾಪ ಹಾಕ್ತಿದ್ದಾರೆ.  ಕೂಡಲೇ ಗುತ್ತಿಗೆದಾರ, ಡ್ರೈವರ್ ಮತ್ತು ಏಜೆಂಟರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Author:

...
Editor

ManyaSoft Admin

Ads in Post
share
No Reviews