ಕೊರಟಗೆರೆ : ಕೊರಟಗೆರೆ BJP ಮಂಡಲ ಅಧ್ಯಕ್ಷರಾಗಿ ರುದ್ರೇಶ್‌ ಆಯ್ಕೆ | ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ

ಬಿಜೆಪಿ ಕಾರ್ಯಕರ್ತರು ನೂತನ ಮಂಡಲ ಅಧ್ಯಕ್ಷ್ಯರಾದ ರುದ್ರೇಶ್ ಅವರಿಗೆ ಸನ್ಮಾನಿಸಿದರು.
ಬಿಜೆಪಿ ಕಾರ್ಯಕರ್ತರು ನೂತನ ಮಂಡಲ ಅಧ್ಯಕ್ಷ್ಯರಾದ ರುದ್ರೇಶ್ ಅವರಿಗೆ ಸನ್ಮಾನಿಸಿದರು.
ತುಮಕೂರು

ಕೊರಟಗೆರೆ:

ಬಿಜೆಪಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಬಿಜೆಪಿ ಮುಂದಾಗಿದ್ದು, ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ನೂತನ ಮಂಡಲ ಅಧ್ಯಕ್ಷರಾಗಿ ರುದ್ರೇಶ್‌ ಅವರನ್ನು ನೇಮಕ ಮಾಡಲಾಗಿದೆ. ಕೊರಟಗೆರೆಯ ನವೀನ್‌ ಕಂಫರ್ಟ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನೂತನ ಮಂಡಲ ಅಧ್ಯಕ್ಷರಾದ ರುದ್ರೇಶ್‌ ಅವರಿಗೆ ಸನ್ಮಾನ ಮಾಡಲಾಯಿತು.

ಈ ವೇಳೆ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಅರುಣ್‍ಕುಮಾರ್, ಹಿರಿಯ ಬಿಜೆಪಿ ಮುಖಂಡ ಚಂದ್ರಪ್ಪ, ಸಿ.ಎನ್ ದುರ್ಗಾ ಹೋಬಳಿಯ ಅಧ್ಯಕ್ಷ ಸಿದ್ದನಂಜಪ್ಪ, ಕಸಬಾ ಅಧ್ಯಕ್ಷ ದಯಾನಂದ್, ಮುಖಂಡರಾದ ಮೋಹನ್, ಮುಕ್ಕಣ್ಣಪ್ಪ, ಕುಮಾರಣ್ಣ ಸೇರಿ ಹಲವು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ನೂತನ ಮಂಡಲ ಅಧ್ಯಕ್ಷ ರುದ್ರೇಶ್‌, ಬಿಜೆಪಿ ಪಕ್ಷದ ಕಾರ್ಯಕರ್ತರ ಬಲಪಡಿಸುವ ಸಲುವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಬಾರಿ ಬರುವ ಎಲ್ಲಾ ಚುನಾವಣೆಗಳಲ್ಲೂ  ಜೆಡಿಎಸ್ ಹಾಗೂ ಬಿಜೆಪಿ ಎನ್ ಡಿ ಎ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಳ್ಳೋಣ ಎಂದರು. ಎರಡು ಪಕ್ಷದ ಕಾರ್ಯಕರ್ತರಲ್ಲಿ ಯಾರೊಬ್ಬರಲ್ಲೂ  ಭಿನ್ನಾಭಿಪ್ರಾಯ ಬಾರದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸೋಣ ಎಂದರು.

Author:

...
Editor

ManyaSoft Admin

Ads in Post
share
No Reviews