KORATAGARE - : ಪೊಲೀಸ್ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು !! ಕರೆಂಟ್ ಕಟ್.. 10 ಕಡೆ ನಾಕಾಬಂಧಿ…ಪಟ್ಟಣಕ್ಕೆ ವಾಹನ ಬಿಡದೇ ಭದ್ರತೆ

ಧ್ವಜಸ್ತಂಭವನ್ನು ತೆರವು
ಧ್ವಜಸ್ತಂಭವನ್ನು ತೆರವು
ತುಮಕೂರು

10 ಕಡೆ ಪೊಲೀಸ್‌ ಸಿಬ್ಬಂದಿಯಿಂದ ನಾಕಾಬಂದಿ, ಪಟ್ಟಣಕ್ಕೆ ವಾಹನಗಳ ನಿರ್ಬಂಧ, ಕರೆಂಟ್‌ ಕಟ್‌, 250ಕ್ಕೂ ಹೆಚ್ಚು ಪೊಲೀಸದ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು ಕಾರ್ಯಾಚರಣೆ..  ಧ್ವಜಸ್ತಂಭ ತೆರವಾಗೋವರೆಗೂ ಕಣ್ಣಿಗೆ ನಿದ್ರೆ ಇಲ್ಲ…. ಯಾವ ಟೈಂನಲ್ಲಿ ಗಲಾಟೆ ಆಗುತ್ತೆ ಅನ್ನೋ ಆತಂಕ.. ಇಂತಹ ಭೀತಿ ಏರ್ಪಟ್ಟಿದ್ದು ಕೊರಟಗೆರೆ ಪಟ್ಟಣದಲ್ಲಿ..

 ಹೌದು, ಕೊರಟಗೆರೆ ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣದ ಮುಂಭಾಗದ ಮುಖ್ಯರಸ್ತೆಯಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಸುಮಾರು 30 ಅಡಿ ಎತ್ತರದ ಕನ್ನಡ ಧ್ವಜಸ್ತಂಭವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು… ಆದ್ರೆ ಈ ಧ್ವಜ ಸ್ತಂಭದಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತೆ ಎಂದು ತಡರಾತ್ರಿ ಪೊಲೀಸ್‌ ಇಲಾಖೆ, PWD ಇಲಾಖೆ, ಪಟ್ಟಣ ಪಂಚಾಯ್ತಿ ಹಾಗೂ ಬೆಸ್ಕಾಂ ಇಲಾಖೆಗಳು ಜಂಟಿಯಾಗಿ ತಡರಾತ್ರಿ 1 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಧ್ವಜಸ್ತಂಭವನ್ನು ತೆರವು ಮಾಡಲಾಯ್ತು..

ಇನ್ನು ಧ್ವಜಸ್ತಂಭ ತೆರವುಗೊಳಿಸುತ್ತಿರೋದ್ರಿಂದ ಗಲಾಟೆಗಳು ಭುಗಿಲೇಳಬಹುದೆಂದು ಕೊರಟಗೆರೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸಿದ್ದೇಶ್ವರ ಕಲ್ಯಾಣ ಮಂಟಪ, ಹೊಳವನಹಳ್ಳಿ ಬೈಪಾಸ್, ಬೋಡಬಂಡೇನಹಳ್ಳಿ ರಸ್ತೆ, ಮಲ್ಲೇಶಪುರ ರಸ್ತೆ, ಊರ್ಡಿಗೆರೆ ಕ್ರಾಸ್, ರೇಣುಕಾ ಆಸ್ಪತ್ರೆಯ ರಸ್ತೆ, ಪೋಸ್ಟ್ ಆಪೀಸ್, ಪಟ್ಟಣ ಪಂ‌ಚಾಯ್ತಿ ಮುಂಭಾಗ ಹಾಗೂ ಕನ್ನಡ ಧ್ವಜಸ್ತಂಭದ ನಾಲ್ಕು ದಿಕ್ಕಿನಲ್ಲಿಯೂ ಪೊಲೀಸ್ ಇಲಾಖೆ ನಾಕಬಂಧಿ ಹಾಕಲಾಗಿತ್ತು. ಜೊತೆಗೆ ಭದ್ರತೆಗಾಗಿ ಮಧುಗಿರಿ ಡಿವೈಎಸ್ಪಿ ಮಂಜುನಾಥ ನೇತೃತ್ವದಲ್ಲಿ ಕೊರಟಗೆರೆ ತಹಶಸೀಲ್ದಾರ್ ಮಂಜುನಾಥ್‌, ಪಿಡ್ಲ್ಯೂಡಿ ಎಇಇ ಸ್ವಾಮಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ್, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಪಿಎಸೈ ಚೇತನ್ ನೇತೃತ್ವದ 250ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಅಲ್ದೇ ಧ್ವಜಸ್ತಂಭ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಪಟ್ಟಣದಲ್ಲಿ ವಿದ್ಯುತ್‌ ಸಂಪರ್ಕವನ್ನು ಬಂದ್‌ ಮಾಡಲಾಗಿತ್ತು. ಸುಮಾರು 3 ಗಂಟೆ ನಡೆದ ಕಾರ್ಯಚರಣೆಯಲ್ಲಿ ಕನ್ನಡಧ್ವಜಸ್ತಂಭದ 30ಅಡಿ ಎತ್ತರದಲ್ಲಿದ್ದ ಕನ್ನಡ ಭಾವುಟವನ್ನು ಕೆಳಗಿಳಿಸಿ ನಂತರ ಪೋಲನ್ನು ಕೆಳಗೆ ಇಳಿಸಲಾಗಿದೆ. ಧ್ವಜಸ್ತಂಭಕ್ಕೆ ಕಟ್ಟಿದ್ದ ಗೊಡೆಯನ್ನು 2 ಜೆಸಿಬಿ ಮತ್ತು ಡ್ರೀಲಿಂಗ್ ಮೀಷನ್ ಬಳಸಿ ಟ್ರಾಕ್ಟರ್ ಮೂಲಕ ತೆರವು ಮಾಡಲಾಗಿದೆ.

 ಇನ್ನು ಕನ್ನಡ ಧ್ವಜ ಸ್ತಂಭ ತೆರವಿನ ಬಗ್ಗೆ ತಹಶೀಲ್ದಾರ್‌ ಮಂಜುನಾಥ್‌ ಮಾತನಾಡಿ, ಸರ್ಕಾರಿ ಬಸ್‌ ನಿಲ್ದಾಣದ  ಮುಂಭಾಗದ ಮುಖ್ಯರಸ್ತೆಯಲ್ಲಿದ್ದ ಧ್ವಜಸ್ತಂಭದಿಂದ ವಾಹನ ಸಂಚಾರಕ್ಕೆ ತೀರ್ವ ಅಡಚಣೆ ಉಂಟಾಗಿದೆ. ಆ ಧ್ವಜಸ್ತಂಭದಿಂದ ಅಪಘಾತಗಳು ನಡೆದಿದೆ. ಅಪಘಾತ ತಡೆಯಲು ಮುಂಜಾಗ್ರತೆ ಧ್ವಜಕಂಬವನ್ನು ತೆರವು ಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ರು.

 ಅದೇನೆ ಆಗಲಿ, ಧ್ವಜಸ್ತಂಭ ನಿರ್ಮಾಣ ಮಾಡಬೇಕಾದ್ರೆನೆ ಸೂಕ್ತ ಜಾಗದಲ್ಲಿ ಧ್ವಜಸ್ತಂಭವನ್ನು ನಿರ್ಮಾಣ ಮಾಡಬೇಕಿತ್ತು.. ಅದನ್ನು ಬಿಟ್ಟು ನಿರ್ಮಾಣ ಆಗಿ ಇಷ್ಟು ವರ್ಷ ಆದ್ಮೇಲೆ ಸಂಚಾರಕ್ಕೆ ಅಡಚಣೆ ಅಂತಾ ಕಾರಣ ನೀಡಿ ರಾತ್ರೋ ರಾತ್ರಿ ತೆರವು ಮಾಡಿದ್ದು, ಜನರಲ್ಲಿ ಪ್ರಶ್ನೆ ಎದ್ದಿದೆ..

 

Author:

...
Editor

ManyaSoft Admin

Ads in Post
share
No Reviews