ಜಮೀನು, ಮನೆ ನಮ್ಮ ಹೆಸರಲ್ಲಿ ಇದೆ ಅಂತಾ ಆಗಾಗ್ಗೆ ವಿಚಾರಿಸದಲೇ ಇದ್ರೆ ನಮ್ಮ ಆಸ್ತಿ ಕಂಡೋರ ಪಾಲಾಗೋದು ಪಕ್ಕಾ ಕಂಡ್ರಿ.. ವರ್ಷಕ್ಕೋಮ್ಮೆ ಆದ್ರೆ ಖಾತೆ, ಪಾಣಿಯನ್ನು ತೆಗೆಸಿ ಆಸ್ತಿ ನಿಮ್ಮ ಹೆಸರಲ್ಲಿ ಇದ್ಯಾ ಎಂದು ನೋಡಿಕೊಳ್ಳಿ.. ಇಲ್ಲ ಅಂದ್ರೆ ನಿಮ್ಮ ಆಸ್ತಿಯನ್ನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಅಕ್ರಮವಾಗಿ ಬೇರೆಯವರಿಗೆ ಮಾಡಿಕೊಟ್ಟಿರುತ್ತಾರೆ.. ಇಂತಹದ್ದೇ ಒಂದು ಪ್ರಕರಣ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರೋದು ಬೆಳಕಿಗೆ ಬಂದಿದೆ.
: ಹೌದು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಹಾ ವಂಚನೆ ಎಸಗಿದ್ದು, ರಸ್ತೆ ಜೊತೆಗೆ ನೆರೆಹೊರೆಯ ಮನೆಗಳನ್ನು ಅಕ್ರಮವಾಗಿ ಬೇರೊಬ್ಬರ ಹೆಸರಿಗೆ ಖಾತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಕೇಳಲು ಬಂದ ಅನಿತಾ ಲಕ್ಷ್ಮೀ ಹಾಗೂ ವಿಜಯಲಕ್ಷ್ಮೀ ಎಂಬ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಗಾಗಿ ಗ್ರಾಮ ಪಂಚಾಯ್ತಿಗೆ ಬಂದಿದ್ದಾರೆ.. ಈ ವೇಳೆ ಇವರ ತಂದೆ ಹನುಮಂತರಾಯಪ್ಪ ಅವರ ಹೆಸರಿನಲ್ಲಿರೋ ಆಸ್ತಿ ಬೇರೆಯವರ ಹೆಸರಲ್ಲಿ ಇರೋದು ಬಯಲಾಗಿದ್ದು, ಒಂದು ಕ್ಷಣ ಶಾಕ್ ಆಗಿದ್ರು.
: ಹನುಮಂತರಾಯಪ್ಪ ಅವರ ಹೆಸರಿಗೆ ಸೇರಿರುವ ಆಸ್ತಿಯನ್ನು 2004ರಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನರಸರಾಜು ಎಂಬುವವರಿಗೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೆ.ಆರ್ ರಾಘವೇಂದ್ರ ಎಂಬುವವರು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮಹಾವಂಚನೆ ಬಟಬಯಲಾಗಿದೆ. 40X42 ಅಳತೆಯ ಸೈಟ್‌ನನ್ನು ಸಹೋದರರಾದ ನರಸರಾಜು ಹಾಗೂ ಹನುಮಂತರಾಯಪ್ಪ ಅವರ ಕುಟುಂಬಕ್ಕೆ ವಿಭಾಗವಾಗಿತ್ತು.. ತುಂಬಾ ವರ್ಷಗಳ ಬಳಿಕ ಹನುಮಂತರಾಯಪ್ಪ ಅವರ ಮಕ್ಕಳಾದ ನಟರಾಜು, ಅನಿತಾಲಕ್ಷ್ಮಿ ಹಾಗೂ ವಿಜಯಲಕ್ಷ್ಮಿ ಎಂಬ ಮೂವರು ಮಕ್ಕಳು ಪಿತ್ರಾರ್ಜಿತ ಸೈಟ್‌ನ್ನ ಹಂಚಿಕೆಗೆ ಮುಂದಾಗಿದ್ರು. ಹೀಗಾಗಿ ಈ ಬಗ್ಗೆ ಗ್ರಾಮ ಪಂಚಾಯ್ತಿಯಲ್ಲಿ ವಿಚಾರಿಸಲು ಬಂದಾಗ ಬೇರೆಯವರ ಹೆಸರಿಗೆ ಅಕ್ರಮವಾಗಿ ಖಾತೆ ಆಗಿರೋದು ಬಯಲಾಗಿದೆ.
: ಈ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ಕೇಳಿದ್ರೆ, ವರ್ಗಾವಣೆ ಆದ ಅಂದಿನ ಗ್ರಾ, ಪಂ ಕಾರ್ಯದರ್ಶಿಯಾಗಿದ್ದ ರಾಘವೇಂದ್ರ ಎಂಬುವರ ಮೇಲೆ ಬೊಟ್ಟು ಮಾಡ್ತಿದ್ದಾರೆ. ಕಾರ್ಯದರ್ಶಿ ರಾಘವೇಂದ್ರ ಅವರು ನಿವೇಶನ ರಸ್ತೆ ಸೇರಿ 40×60 ಅಳತೆ ಜಾಗವನ್ನ ನರಸರಾಜುಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ̤ ಆದ್ರೆ ನರಸರಾಜು ಅವರು ಖಾದಿ ಗ್ರಾಮೋದ್ಯಮ ಮಂಡಳಿಯಲ್ಲಿ ನಿವೇಶನದ ಮೇಲೆ ಸಾಲ ಮಾಡಿಕೊಂಡಿದ್ದರು.. ಸಾಲ ತೀರಿಸದೇ ಅವರ ಭಾಗಕ್ಕೆ ಬಂದಿರೋ ಸೈಟ್‌ನನ್ನು ಮಾತ್ರ ಬರೆದು ಕೊಡದೇ ತಮ್ಮ ತಂದೆಯ ಹೆಸರಿಗೆ ಸೇರಿರೋ ಆಸ್ತಿಯನ್ನು ಕೂಡ ಖಾದಿ ಗ್ರಾಮೋದ್ಯಮ ಮಂಡಳಿಗೆ ಬರೆದುಕೊಟ್ಟಿದ್ದಾರೆ… ಇದ್ರ ಜೊತೆಗೆ ನಿವೇಶನ ಮಾತ್ರವಲ್ಲದೇ ರಸ್ತೆಯನ್ನು ಕೂಡ ಬೇರೆಯವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಹನುಮಂತರಾಯಪ್ಪ ಅವರ ಪುತ್ರಿ ಅನಂತಲಕ್ಷ್ಮೀ ಗಂಭೀರ ಆರೋಪ ಮಾಡ್ತಾ ಇದ್ದಾರೆ, ಸೈಟ್ ಕಳೆದುಕೊಂಡಿದ್ದರಿಂದ ಹನುಮಂತರಾಯಪ್ಪ ಅವರ ಕುಟುಂಬ ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ಈ ಸಂಬಂಧ ತುಮಕೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಸೆಲ್‌ನಲ್ಲಿ ದೂರು ದಾಖಲಿಸಿದ್ದಾರೆ
ಅದೇನೆ ಆಗಲಿ, ಅಧಿಕಾರ ಇದೆ ಎಂದು ಕಂಡೋರ ಜಮೀನನ್ನು ಪರ್ಮಿಷನ್ ಇಲ್ಲದೇ ಬೇರೆಯವರ ಹೆಸರಿಗೆ ಖಾತೆ ಮಾಡಿಕೊಡೋದು ಹೆಚ್ಚಾಗ್ತಾ ಇದ್ದು, ಉನ್ನತ ಅಧಿಕಾರಿಗಳು ಈ ಬಗ್ಗೆಷ ಗಮನ ಹರಿಸಿ ಅನ್ಯಾಯವನ್ನು ಸರಿಪಡಿಸಬೇಕಿದೆ.