ಕೊಪ್ಪಳ: ಗಮನ ಸೆಳೆದ ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ಹಣ್ಣು..!

ರೂಬಿ ರೋಮನ್ ದ್ರಾಕ್ಷಿ ಹಣ್ಣು
ರೂಬಿ ರೋಮನ್ ದ್ರಾಕ್ಷಿ ಹಣ್ಣು
ಕೊಪ್ಪಳ

ಕೊಪ್ಪಳ: 

ಜಪಾನಿನ ರೂಬಿ ರೋಮನ್ ಎನ್ನುವ ದ್ರಾಕ್ಷಿ ತಳಿಯ ಬೆಲೆ ಒಂದು ಕೆಜಿಗೆ 8 ಲಕ್ಷ ರೂಪಾಯಿ ಇದ್ದು, ಕೊಪ್ಪಳದಲ್ಲಿ ನಡೆಯುತ್ತಿರುವ ಹಣ್ಣುಗಳ ಮೇಳದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಭಾಗದ ರೈತರು ಕಣ್ಣುಂಬಿಕೊಳ್ಳಲಿ ಎಂಬ ಸದುದ್ದೇಶದಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ

ಕೊಪ್ಪಳದ ತೋಟಗಾರಿಕೆ ಇಲಾಖೆ ಪ್ರತಿವರ್ಷದಂತೆ ವರ್ಷವೂ ಶಿವರಾತ್ರಿಯ ನಿಮಿತ್ತ ಐದು ದಿನಗಳ ಕಾಲ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದ ಮುಖ್ಯ ಆಕರ್ಷಣೆ ಎಂಟು ಲಕ್ಷ ರೂಪಾಯಿಯ 250 ಗ್ರಾಂ ರೂಬಿ ರೋಮನ್ ದ್ರಾಕ್ಷಿ ಹಣ್ಣು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದರ ಸತತ ಪ್ರಯತ್ನದಿಂದಾಗಿ ಕೊಪ್ಪಳದಲ್ಲಿ ಮೊದಲ ಬಾರಿಗೆ 8 ಲಕ್ಷ ರೂಪಾಯಿ ಬೆಲೆಯ ದ್ರಾಕ್ಷಿ ಪ್ರದರ್ಶನಕ್ಕೆ ಇಡಲಾಗಿದೆ. ಮುಂಬೈಯ ವ್ಯಾಪಾರಸ್ಥರ ಮೂಲಕ ಇದನ್ನು ಕೊಪ್ಪಳಕ್ಕೆ ತರಲಾಗಿದೆ ಹಿಂದೆ ಎರಡುವರೆ ಲಕ್ಷ ಬೆಲೆಬಾಳುವ ಮಿಯಜಾಕಿ ಎನ್ನುವ ಮಾವಿನ ತಳಿಯನ್ನು ತರಿಸಲಾಗಿತ್ತು. ಸಲ ಹಣ್ಣಿನ ಮೇಳದ ಮುಖ್ಯ ಆಕರ್ಷಣೆ ರುಬಿ ರೂಮನ್ಇನ್ನೂ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗಿ ಉದ್ಘಾಟಿಸಿದರು.

ಫೆ.23 ರಿಂದ 27ರವರೆಗೆ 5 ದಿನಗಳ ಕಾಲ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ ಆವರಣ ಕೊಪ್ಪಳದಲ್ಲಿ ಹಣ್ಣುಗಳ ಮೇಳ ಮತ್ತು ಮಾರಾಟ ನಡೆಯುತ್ತಿದೆ. ದ್ರಾಕ್ಷಿಯ ವಿವಿಧ ತಳಿಗಳು, ವಿವಿಧ ಹಣ್ಣಿನ ತಳಿಗಳು, ಹಳದಿ ಕಲ್ಲಂಗಡಿ ಹಣ್ಣು, ಜೇನು ಸೇರಿದಂತೆ ಇತರ ಹಣ್ಣಿನ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ.

 

Author:

...
Editor

ManyaSoft Admin

Ads in Post
share
No Reviews