ಕೋಲಾರ:
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ರೈತನೊಬ್ಬ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕೊತ್ತೂರು ಗ್ರಾಮದ 40 ವರ್ಷದ ಚಂದ್ರಪ್ಪ ಮೃತ ವ್ಯಕ್ತಿಯಾಗಿದ್ದಾರೆ. ರೈತ ಚಂದ್ರಪ್ಪ ಅವರು ತಮ್ಮ 3 ಏಕರೆ ಜಮೀನಿನಲ್ಲಿ ವ್ಯವಸಾಯ ಹಾಗೂ ಹೈನುಗಾರಿಕೆಗಾಗಿ ಕೈಸಾಲ ಸೇರಿದಂತೆ ವಿವಿಧ ಫೈನಾನ್ಸ್ ಗಳು ಹಾಗೂ 4 ಬ್ಯಾಂಕ್ ಗಳಿಂದ ಸುಮಾರು 20 ರಿಂದ 22 ಲಕ್ಷದವರೆಗೂ ಸಾಲ ಪಡೆದಿದ್ದು. ಪ್ರತಿನಿತ್ಯ ಸಾಲಗಾರರು ಹಾಗೂ ಫೈನಾನ್ಸ್ ನವರು ಮನೆಮುಂದೆ ಬಂದು ನಿಲ್ಲುತ್ತಿದ್ದರು.
ಇತ್ತೀಚೆಗೆ ಬೆಳೆದಿದ್ದ ಹೂವು ಹಾಗೂ ಸೌತೆಕಾಯಿ ಬೆಳೆಗಳಿಗೆ ಸೂಕ್ತ ಬೆಲೆ ಬಾರದ ಹಿನ್ನೆಲೆ ಮನನೊಂದು ಹಾಗೂ ಸಾಲ ಕಟ್ಟುವ ಕುರಿತು ಭಯಗೊಂಡಿದ್ದರು, ಹೀಗಾಗಿ ಸಾಲದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ, ನಂಗಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.