ಕೋಲಾರ : ನಕಲಿ ದಾಖಲೆ ಸೃಷ್ಟಿಸಿ ಡಿಸಿಸಿ ಬ್ಯಾಂಕ್ ಗೆ ವಂಚನೆ..!

ಕೋಲಾರ:

ಮಹಿಳಾ ಸಂಘದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಡಿಸಿಸಿ ಬ್ಯಾಂಕ್‌ ನಲ್ಲಿ 1. 75 ಕೋಟಿ ವಂಚಿಸಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲ್‌ ಪಾಡು ವ್ಯಾಪ್ತಿಯಲ್ಲಿ ನಡೆದಿದೆ.

ಕೋಲಾರದ 11 ತಾಲೂಕು ವ್ಯಾಪ್ತಿಯಲ್ಲಿ ಬರುವ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಲ್ಲಿ ಮಹಿಳೆಯರ ಸಂಘದ ಹೆಸರಿನಲ್ಲಿ ಬರುವ 5 ಸ್ವಸಹಾಯ ಮಹಿಳಾ ಸಂಘಗಳ ಹೆಸರಲ್ಲಿ ನಕಲಿ ಬ್ಯಾಂಕ್‌ ಗಳ ಕಡತ ಸೃಷ್ಟಿಸಿ 1. 75 ಕೋಟಿ ವಂಚನೆ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಬ್ಯಾಂಕ್‌ ಆಡಳಿತಾಧಿಕಾರಿ ಸೇರಿದಂತೆ ನಾಲ್ವರ ವಿರುದ್ದ ಸ್ಥಳೀಯರಾದ ಪಾರ್ವತಮ್ಮ ಎಂಬುವರು ರಾಯಲ್‌ ಪಾಡು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಲಾರ ಡಿಸಿಸಿ ಬ್ಯಾಂಕಿನ ಮಾಜಿ ಸಿಇಒ ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೆ ಗೌಡ, ಬ್ಯಾಂಕ್‌ ಸಿಇಒ ನಾರಾಯಣಸ್ವಾಮಿ ಮತ್ತು ಶ್ರೀನಿವಾಸಪುರ ಸಹಕಾರಿ ಬ್ಯಾಂಕ್‌ ಮ್ಯಾನೇಜರ್‌ ಶ್ರೀನಿವಾಸ್‌ ವಿರುದ್ದ ಬ್ಯಾಂಕ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಪಾಡು ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ.

Author:

share
No Reviews