ಕೊಡಗು : ಮದುವೆ ಸಮಾರಂಭಗಳಲ್ಲಿ ಸಿಎಲ್-5 ಸನ್ನದು ಕಡ್ಡಾಯಗೊಳಿಸಿದ ಅಬಕಾರಿ ಇಲಾಖೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಡಗು

ಕೊಡಗು:

ಕೊಡಗಿನ ಮದುವೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಮದ್ಯ ಸೇವನೆ ಮಾಡುವುದು ಸಂಪ್ರದಾಯವಾಗಿದ್ದುಆದರೀಗ ಇಂತಹ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜಿಗೆ ಒಂದು ದಿನದ ಸನ್ನದು ಪಡೆಯುವುದನ್ನು ಅಬಕಾರಿ ಇಲಾಖೆ ಕಡ್ಡಾಯಗೊಳಿಸಿದೆ. ಬೇರೆಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ನಡೆಯುವ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಸ್ಕೃತಿ, ಊಟೋಪಚಾರಗಳಲ್ಲಿ ಭಿನ್ನತೆ ಕಾಣುತ್ತದೆ. ಆದರೆ ಈಗ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜು ಮಾಡುವುದಾದರೆ ಅಬಕಾರಿ ಇಲಾಖೆಯಿಂದ ಒಂದು ದಿನದ ಸನ್ನದು ಪಡೆಯುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ಸೂಚಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಇದು ರಾಜ್ಯ ಅಬಕಾರಿ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಸನ್ನದ್ದು ಪಡೆಯಲು ಸೂಚಿಸಿರುವುವಾಗಿ ಆಯುಕ್ತರು ಹೇಳಿದ್ದಾರೆ.

ಕೊಡಗಿನಲ್ಲಿ ಹೆಚ್ಚಿನವರು ಸೈನ್ಯದಲ್ಲಿ ಕೆಲಸ ಮಾಡುವವರು, ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಿದ್ದು ಸಮಾರಂಭಗಳು ನಡೆದಾಗ ಕೆಲವರು ತಮ್ಮ ಕೋಟಾದ ಮದ್ಯವನ್ನು ನೀಡುತ್ತಾರೆ. ಅದನ್ನೇ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವುದು ಇದೆ. ಇನ್ನು ಹೊರಗಿನಿಂದ ಅಕ್ರಮ ಮದ್ಯಗಳು ಬರುತ್ತಿದ್ದು, ಹೊರಗಿನಿಂದ ಮದ್ಯವನ್ನು ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಇವೆಲ್ಲದಕ್ಕೂ ಕಡಿವಾಣ ಹಾಕುವ ಮತ್ತು ರಾಜ್ಯದಲ್ಲಿ ಮಾರಾಟವಾಗುವ ಅಧಿಕೃತ ಮದ್ಯವನ್ನೇ ಬಳಸುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಸಾರ್ವಜನಿಕವಾಗಿ ಮದ್ಯ ಸರಬರಾಜು ಮಾಡುವವರು ಅಬಕಾರಿ ಕಾಯ್ದೆ ಅಡಿಯಲ್ಲಿ ಒಂದು ದಿನಕ್ಕೆ ಸಂಬಂಧಿಸಿದಂತೆ ವೆಬ್‌ ಸೈಟ್‌ ನಲ್ಲಿ ಸಿಎಲ್-5 ಸನ್ನದು ಪಡೆಯಬೇಕಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಒಂದು ವೇಳೆ ಸ್ಥಳಗಳಲ್ಲಿ ಅಬಕಾರಿ ಇಲಾಖೆಯಿಂದ ಯಾವುದೇ ಸನ್ನದು ಪಡೆಯದೇ ಮದ್ಯ ಬಳಕೆ, ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಸ್ಥಳದ ಮಾಲೀಕರು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಅಬಕಾರಿ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಆಯುಕ್ತರು ಎಚ್ಚರಿಸಿದ್ದಾರೆ.
 

Author:

...
Editor

ManyaSoft Admin

Ads in Post
share
No Reviews