kitchen- ಮನೆಯಲ್ಲಿ ಸಿಂಪಲ್ ಆಗಿ ಮಾಡಿ ಕ್ಯಾರೆಟ್ ಹಲ್ವಾ

ಕ್ಯಾರೆಟ್‌ ಹಲ್ವಾ
ಕ್ಯಾರೆಟ್‌ ಹಲ್ವಾ
ಆರೋಗ್ಯ-ಜೀವನ ಶೈಲಿ

ಕ್ಯಾರೆಟ್‌ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮಕ್ಕಳಿಗೆ ಕ್ಯಾರೆಟ್‌ನಿಂದ ಮಾಡಿದ ಆಹಾರವನ್ನು ನೀಡಲಾಗುತ್ತದೆ. ಪ್ರತಿದಿನ ಬೆಳಗಿನ ಉಪಹಾರದ ಭಾಗವಾಗಿ ಒಂದರಿಂದ ಎರಡು ಕ್ಯಾರೆಟ್‌ಗಲನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಆಗುತ್ತದೆ. ಬಹುತೇಕರಿಗೆ ಕ್ಯಾರೆಟ್‌ ಎಂದಾಕ್ಷಣ ನೆನಪಾಗುವುದು ಹಲ್ವಾ. ಮ್ಕಳಿಂದ ಹಿಡಿದು ದೊಡ್ಡವರವರೆಗೂ ಈ ರೆಸಿಪಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಬಾಯಿಗೆ ರುಚಿಕರವಾಗಿರುವ ಈ ಕ್ಯಾರೆಟ್‌ ಹಲ್ವಾವನ್ನು ಸುಲಭವಾಗಿ ಮಾಡುವುದು ಹೇಗೆ ನೋಡೋಣ ಬನ್ನಿ..

ಕ್ಯಾರೆಟ್‌ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು

ತುಪ್ಪ – 3 ಚಮಚ

ಗೋಡಂಬಿ - 15

ಕ್ಯಾರೆಟ್ – 4ಕಪ್‌

ಹಾಲು – 3ಕಪ್‌

ಸಕ್ಕರೆ – 1 ಕಪ್‌

ಒಣ ದ್ರಾಕ್ಷಿ - 15

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ತುಪ್ಪಕ್ಕೆ ಗೋಡಂಬಿ ಒಣ ದ್ರಾಕ್ಷಿ ಹುರಿಯಿರಿ. ಹುರಿದುಕೊಂಡ ಗೋಡಂಬಿಗಳನ್ನು ಪಕ್ಕಕ್ಕೆ ಇರಿಸಿ. ನಂತರ ತುರಿದ ಕ್ಯಾರೆಟ್ ಮತ್ತು ಹಾಲನ್ನು ಸೇರಿಸಿ. ಎರಡು ಸಾಮಾಗ್ರಿಗಳು ಚೆನ್ನಾಗಿ ಬೆರೆತು ಮೃದುವಾಗಿ ಬೇಯುವಂತೆ ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿ. ಕ್ಯಾರೆಟ್ ಚೆನ್ನಾಗಿ ಬೆಂದು, ಹಾಲು ಕ್ಯಾರೆಟ್ ನೊಂದಿಗೆ ಸೇರಿಕೊಂಡ ಬಳಿಕ ಸಕ್ಕರೆಯನ್ನು ಸೇರಿಸಿ. ಸಕ್ಕರೆಯನ್ನು ಚೆನ್ನಾಗಿ ಮಿಶ್ರಗೊಳಿಸಿದ ಬಳಿಕ ಸ್ವಲ್ಪ ಸಮಯ ಬೇಯಲು ಬಿಡಿ. ಬೆಂದ  ಬಳಿಕ ತುಪ್ಪದಲ್ಲಿ ಹುರಿದುಕೊಂಡ ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಸೇರಿಸಿದ್ರೆ ೧೫ ನಿಮಿಷದಲ್ಲಿ ಸಿಂಪಲ್‌ ಆದ ಕ್ಯಾರೆಟ್‌ ಹಲ್ವಾ ರೆಡಿ.

 

Author:

share
No Reviews