ಕೇರಳ:
ಮೀನು ಹಿಡಿಯುತ್ತಿದ್ದಾಗ ಗಂಟಲಲ್ಲಿ ಮೀನು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದ ಆಲ್ಪುಳ ಸಮೀಪದ ಕಾಯಂಕುಲದಲ್ಲಿ ನಡೆದಿದೆ.
ಕೇರಳದ ಪುತ್ತುಪಲ್ಲಿಯ ನಿವಾಸಿ 25 ವರ್ಷದ ಆದರ್ಶ್ ಮೃತ ದುರ್ದೈವಿಯಾಗಿದ್ದಾನೆ. ಭಾನುವಾರ ಸಂಜೆ ತನ್ನ ಸ್ನೇಹಿತರ ಜೊತೆ ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ, ಒಂದು ಮೀನನ್ನು ಹಿಡಿದ ಮೇಲೆ ಮತ್ತೊಂದು ಮೀನು ಹಿಡಿಯಲು ಹೋಗಿದ್ದಾನೆ, ಆ ವೇಳೆ ಮೀನು ಯುವಕನ ಬಾಯಿಗೆ ಕಚ್ಚಿ ಗಂಟಲಿನಲ್ಲಿ ಹೋಗಿ ಸಿಲುಕಿಕೊಂಡಿದೆ. ಮೀನು ಸಿಲುಕಿಕೊಂಡ ಪರಿಣಾಮ ಯುವಕನಿಗೆ ಉಸಿರಾಡಲು ತೊಂದರೆಯಾಗಿದೆ. ಕೂಡಲೇ ಸ್ನೇಹಿತರು ಆತನನ್ನು ಓಚಿರಾದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.