ತುಮಕೂರು:
ಬೆಳಗಾವಿ ಗಡಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ, ಹಾಗೂ ಮರಾಠಿ ಪುಂಡರ ಹಾವಳಿ ವಿರೋಧಿಸಿ ಅಲ್ಲದೇ ರಾಜ್ಯದ ಹಿತಾಸಕ್ತಿ ಸಂಬಂಧಿಸಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಹೀಗಾಗಿ ನಾಳೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಬಸ್ ಸೇವೆಗಳು ಇರುತ್ತೋ ಇಲ್ವೋ ಎಂಬ ಪ್ರಶ್ನೆ ಹಲವರಲ್ಲಿದೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ್ದ ಹಲ್ಲೆ, ದಬ್ಬಾಳಿಕೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಬಂದ್‌ಗೆ ಮುಂದಾಗಿವೆ,
ಬಂದ್ ಹಿನ್ನೆಲೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ, ರ್ಯಾಲಿಗಳು ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಭಿತ್ತಿಪತ್ರ ಪ್ರದರ್ಶನ, ಧಿಕ್ಕಾರ, ಘೋಷಣೆಗಳು ನಡೆಯಲಿವೆ, ಇನ್ನು ತುಮಕೂರಿಗೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ. ಹೌದು ತುಮಕೂರಿನ ಕನ್ನಡ ಪರ ಸಂಘಟನೆಗಳಿಂದ ಭಿನ್ನಮತ ಸೃಷ್ಟಿಯಾಗಿದ್ದು ಒಂದು ಬಣ ಬಂದ್ ಮಾಡಲು ನಿರ್ಧರಿಸಿದ್ರೆ, ಮತ್ತೊಂದು ಬಣ ಬಂದ್ ಬದಲಾಗಿ ರ್ಯಾಲಿ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ತುಮಕೂರಿನ ಕರವೇ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ನಾಳೆ ನಗರದಲ್ಲಿ ರ್ಯಾಲಿ ಮೂಲಕ ಕರ್ನಾಟಕ ಬಂದ್ ಆಚರಿಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ರು.
ಅಲ್ದೇ ಮತ್ತೊಂದು ಬಣ ನಾಳೆ ಎಸ್‌ಎಸ್‌ಎಲ್‌ಸಿ ಎಕ್ಸಾಂ ಇರೋದ್ರಿಂದ ಮಕ್ಕಳ ಪರೀಕ್ಷೆಗೆ ಯಾವುದೇ ಅಡಿಯಾಗಬಾರದೆಂಬ ಕಾರಣಕ್ಕೆ ಕರ್ನಾಟಕ ಬಂದ್ ಬೇಡ ಎಂದು ವಿರೋಧವನ್ನು ವ್ಯಕ್ತಪಡಿಸಿದೆ.
ಹಾಗಾದ್ರೆ ನಾಳಿನ ಬಂದ್‌ಗೆ ತುಮಕೂರಿನಲ್ಲಿ ಯಾರ ಯಾರ ಬೆಂಬಲ ಇದೆ, ಯಾರ್ ಯಾರ್ ಬೆಂಬಲ ಇಲ್ಲ ಅನ್ನೋದನ್ನ ನೋಡೋದಾದ್ರೆ,
- ಆಟೋ ಚಾಲಕರ ಸಂಘಟನೆ
- ಖಾಸಗಿ ಸಾರಿಗೆ ಒಕ್ಕೂಟ
- ಕಾರ್ಮಿಕ ಪರಿಷತ್
ಏನೆಲ್ಲಾ ಬಂದ್ ಆಗಿರಲಿವೆ..?
- ಥಿಯೇಟರ್- ಬೆಳಗಿನ ಪ್ರದರ್ಶನ ಮಾತ್ರ ಬಂದ್
- ಬೀದಿ ಬದಿ ವ್ಯಾಪಾರ- ನೈತಿಕ ಬೆಂಬಲ, ಎಂದಿನಂತೆ ವ್ಯಾಪಾರ
- ಖಾಸಗಿ ಸಾರಿಗೆ- ಶಾಲಾ ವಾಹನ ಬಿಟ್ಟು ಸೇವೆ ಬಂದ್
ಇನ್ನು ಕರ್ನಾಟಕ ಬಂದ್ ವೇಳೆ ತುಮಕೂರಿನಲ್ಲಿ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು ಸೇರಿ ಎಲ್ಲಾ ಓಪನ್ ಇರುತ್ತೆ.. ಯಾಕೆಂದ್ರೆ ಕರ್ನಾಟಕ ಬಂದ್‌ಗೆ ಕೆಲ ಸಂಘಟನೆಗಳಷ್ಟೇ ಬೆಂಬಲ ನೀಡಿರೋದ್ರಿಂದ ತುಮಕೂರಿನಲ್ಲಿ ರ್ಯಾಲಿ ನಡೆಯಲಿದ್ದು, ಎಲ್ಲಾ ಸೇವೆಗಳು ಸಿಗಲಿವೆ ಎಂದು ಹೇಳಲಾಗ್ತಿದೆ.
ಒಟ್ನಲ್ಲಿ ಮರಾಠಿ ಪುಂಡರ ಅಟ್ಟಹಾಸ ವಿರೋಧಿಸಿ ನಾಳೆ ಕರುನಾಡಿನ ಕೆಲ ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಲಿದ್ದು, ತುಮಕೂರಿನಲ್ಲಿ ಯಾವ ರೀತಿ ಪರುಸ್ಥಿತಿ ಇರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.