2024-25 ನೇ ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿವೆ. ಮಾರ್ಚ್ 01 ರಿಂದ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿವೆ. ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ಶಿಕ್ಷಣ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ಪರೀಕ್ಷೆಯ ತಯಾರಿ ಕುರಿತು ಇಂದು ಮಾಧ್ಯಮಗೊಷ್ಠಿ ನಡೆಸಲಿದ್ದಾರೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ದಿನಾಂಕ, ಸಮಯ ಈಗಾಗಲೇ ನಿಗದಿಯಾಗಿದೆ. ವಿದ್ಯಾರ್ಥಿಗಳು ಪೂರ್ವ ತಯಾರಿಯಲ್ಲಿದ್ದಾರೆ. ಹೇಗೆ ಓದಬೇಕು, ಹೆಚ್ಚು ಅಂಕ ಪಡೆಯಲು ಯಾವ ಮಾದರಿ ಸ್ಟಡಿ ಮಾಡಬೇಕು ಎನ್ನುವ ಹಲವು ಯೋಚನೆಗಳು ವಿದ್ಯಾರ್ಥಿಗಳಲ್ಲಿ ಇರುತ್ತವೆ. ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.
ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4ರ ತನಕ ನಡೆಯಲಿವೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಶಾಲೆಗಳು, ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಹೇಗೆ ಇರಬೇಕು ಎಂಬುದನ್ನು ಶಿಕಕ್ಷರಿ ಮನದಟ್ಟು ಮಾಡುತ್ತಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 01- ಕನ್ನಡ, ಅರೇಬಿಕ್
ಮಾರ್ಚ್ 03- ಗಣಿತ, ಶಿಕ್ಷಣ ಶಾಸ್ತ್ರ, ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ
ಮಾರ್ಚ್ 04- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 05- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ 07- ಇತಿಹಾಸ, ಭೌತಶಾಸ್ತ್ರ
ಮಾರ್ಚ್ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12- ಮನಃಶಾಸ್ತ್ರ, ಮೂಲ ಗಣಿತ, ರಸಾಯನಶಾಸ್ತ್ರ,
ಮಾರ್ಚ್ 13- ಅರ್ಥ ಶಾಸ್ತ್ರ
ಮಾರ್ಚ್ 15- ಇಂಗ್ಲೀಷ್
ಮಾರ್ಚ್ 17- ಭೂಗೋಳಶಾಸ್ತ್ರ
ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ
ಮಾರ್ಚ್ 19- ಮಾಹಿತಿ ತಂತ್ರಜ್ಞಾನ, ರೀಟೈಲ್, ಹಿಂದೂಸ್ತಾನಿ ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್
ಮಾರ್ಚ್ 20- ಹಿಂದಿ
10ನೇ ತರಗತಿ ವೇಳಾಪಟ್ಟಿ
ಮಾರ್ಚ್ 21- ಪ್ರಥಮ ಭಾಷೆ
ಮಾರ್ಚ್ 24- ಗಣಿತ
ಮಾರ್ಚ್ 26- ದ್ವಿತೀಯ ಭಾಷೆ
ಮಾರ್ಚ್ 29- ಸಮಾಜ ವಿಜ್ಞಾನ
ಏಪ್ರಿಲ್ 2- ವಿಜ್ಞಾನ
ಏಪ್ರಿಲ್ 4- ತೃತೀಯ ಭಾಷೆ