ವಿಜಯ್ ಪ್ರಕಾಶ್ ಇಂದು 49 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರು ಮೊದಲು ಸಿನಿಮಾ ಹಾಡುಗಳ ಗಾಯಕನಾಗಿ ಅಲ್ಲದೆ ಜಿಂಗಲ್ ಗಾಯಕನಾಗಿ ಗುರುತಿಸಿಕೊಂಡಿದ್ದರು. ವಿಜಯ್ ಪ್ರಕಾಶ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 3000 ಜಿಂಗಲ್ಗಳನ್ನು ಹಾಡಿದ್ದಾರೆ. ವಿಜಯ್ ಪ್ರಕಾಶ್ ಮೂಲತಃ ಮೈಸೂರಿನವರು. ಇವರ ತಂದೆ ಲೇಟ್ ರಾಮಶೇಷು, ತಾಯಿ ಲೋಪಾಮುದ್ರ. ತಂದೆ ತಾಯಿ ಇಬ್ಬರು ಸಂಗೀತಗಾರರಾದ್ದರಿಂದ ವಿಜಯ್ ಪ್ರಕಾಶ್‌ಗೆ ಕೂಡ ಸಂಗೀತದಲ್ಲಿ ಒಲವು ಮೂಡಿತು.
ಇಂದು ವಿಜಯ್ ಪ್ರಕಾಶ್ ಅವರ ಜನ್ಮದಿನ. ಎಲ್ಲರೂ ನಟಿಗೆ ಶುಭ ಕೋರುತ್ತಿದ್ದಾರೆ. ಅವರು ಹಾಡಿದ ಅನೇಕ ಹಾಡುಗಳು ಈಗಲೂ ಅನೇಕರಿಗೆ ಇಷ್ಟ. ಕನ್ನಡಿಗರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನ ಇದೆ. ಅವರು ಹಾಡಿದ ಗೊಂಬೇ ಹೇಳುತೈತೆ ಅನೇಕರ ಫೇವರಿಟ್ ಹಾಡು. ವಿಜಯ್ ಪ್ರಕಾಶ್ ಅವರು ಆಗಾಗ ಕಾನ್ಸರ್ಟ್ಗಳನ್ನು ಕೂಡ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಈ ಮೊದಲು ಅವರ ಧ್ವನಿ ನೀಡಿದ್ದ ಸಾಕಷ್ಟು ಜಿಂಗಲ್ಸ್ಗಳು ಈಗಲೂ ಗಮನ ಸೆಳೆಯುತ್ತಿವೆ.
ವಿಜಯ್ ಪ್ರಕಾಶ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ವಿಜಯ್ ಪ್ರಕಾಶ್ ಅವರ ಧ್ವನಿಗೆ ಮರಳುಗಾದವರೇ ಇಲ್ಲ ಎಂದರೂ ತಪ್ಪಾಗಲಾರದು. ಅವರಿಗೆ ಕನ್ನಡದಲ್ಲಿ ಸಖತ್ ಬೇಡಿಕೆ ಇದೆ. ಯಾವುದೇ ಕಾನ್ಸರ್ಟ್ ನಡೆಸಿದರೂ ಅವರು ಬೊಂಬೆ ಹೇಳುತೈತೆ ಹಾಡನ್ನು ಹಾಡುತ್ತಾರೆ. ಸದ್ಯ ಸರಿಗಮಪ ವೇದಿಕೆಯಲ್ಲಿ ಜಡ್ಜ್ ಆಗಿದ್ದಾರೆ.