PAVAGADA: ಪಾವಗಡದ ಗ್ರಾಮ ಪಂಚಾಯ್ತಿಗಳಲ್ಲಿನ ಅವ್ಯವಹಾರ ಬಯಲು

ಪಾವಗಡ:

ಯೋಜನೆ ಮುಗಿದು ಸುಮಾರು ವರ್ಷ ಕಳೆದ್ರು ಅದೇ ಯೋಜನೆಯಡಿ ಹಣ ಡ್ರಾ ಮಾಡಿ ಅವ್ಯವಹಾರ ಎಸಗಿರೋ ಪ್ರಕರಣಗಳು ಪಾವಗಡ ತಾಲೂಕಿನ ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹೌದು 14ನೇ ಹಣಕಾಸು ಯೋಜನೆಯು 2020ಕ್ಕೆ ಮುಗಿದಿದ್ದು, 2021ಕ್ಕೆ 15ನೇ ಹಣಕಾಸು ಯೋಜನೆ ಜಾರಿಯಾಗಿದೆ, ಈ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಬೀದಿ ದೀಪ ಅಳವಡಿಕೆ ಸ್ವಚ್ಛತೆ ಸೇರಿ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಕೈಗೊಳ್ಳಬೇಕೆಂಬ ನಿಯಮ ಇರುತ್ತೆ. ಆದ್ರೆ ನಿಯಮಗಳನ್ನು ಗಾಳಿಗೆ ತೂರಿ 15ನೇ ಹಣಕಾಸು ಯೋಜನೆಯ ಅನುದಾನವನ್ನು 14 ನೇ ಹಣಕಾಸು ಯೋಜನೆ ಎಂದು ನಮೂದಿಸಿ ಪಾವಗಡ ತಾಲೂಕಿನ ಕೆಲ ಗ್ರಾಮ ಪಂಚಾಯ್ತಿಯಲ್ಲಿನ ಪಿಡಿಒಗಳು ಜನ ಪ್ರತಿನಿಧಿಗಳ ಗಮನಕ್ಕೆ ತರದೇ ಲಕ್ಷಾಂತರ ರೂಪಾಯಿಯನ್ನು ಇಷ್ಟಬಂದಂತೆ ಹಣವನ್ನು ಏಜೆನ್ಸಿಗಳ ಹೆಸರಿಗೆ ಪಾವತಿಸಿ ಅವ್ಯವಹಾರ ಎಸಗಿರೋ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಇದಕ್ಕೆ ಪುಷ್ಠಿ ನೀಡುವಂತೆ ಪಾವಗಡ ತಾಲೂಕಿನ ತಿರುಮಣಿ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ಎಸಗಿರೋದು ಕಂಡು ಬಂದಿದೆ. 2024ರ ಮಾರ್ಚ್ರಂದು ಶ್ರೀನಿವಾಸ್ಎಂಟರ್ಪ್ರೈಸಸ್ಗೆ 5 ಬಿಲ್ಗಳಾಗಿ ವಿಂಗಡಿಸಿ 4 ಲಕ್ಷದ 33 ಸಾವಿರದ 419 ರೂಪಾಯಿಗಳನ್ನು, ತಿರುಮಲ ಎಲೆಕ್ಟ್ರಿಕ್ಅಂಡ್ರಿವೈಡಿಂಗ್ಗೆ 5 ಬಿಲ್ಗಳಾಗಿ ವಿಂಗಡಿಸಿ 3 ಲಕ್ಷದ 29 ಸಾವಿರದ 38 ರೂಪಾಯಿಗಳನ್ನು ಪಾವತಿಸಲಾಗಿದೆ. ಮತ್ತು ಧನಲಕ್ಷ್ಮೀ ಎಲೆಕ್ಟ್ರಿಕ್‌, ಹಾರ್ಡ್ವೇರ್ಶಾಪ್ಗೆ 2023ರ ಜೂನ್ರಲ್ಲಿ 12 ಬಿಲ್ಗಳಾಗಿ ವಿಂಗಡಿಸಿ ಒಟ್ಟು 14 ಲಕ್ಷದ 12 ಸಾವಿರದ 247 ರೂಪಾಯಿಗಳನ್ನು ಪಾವತಿಸಲಾಗಿದೆ.

ಈ ಎಲ್ಲಾ ಅವ್ಯವಹಾರಗಳನ್ನು ಗಮನಿಸಿದ್ರೆ ಎಷ್ಟೊಂದು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದಾರೆ ಅನ್ನೋದು ಬಟಾಬಯಲಾಗಿದೆ. ಇಷ್ಟು ಹಣ ಪಾವತಿಯಾಗಿದ್ರೆ ಈ ಬಿಲ್ಗಳಿಗೆ ಸಾಮಾಗ್ರಿಗಳನ್ನು ಖರೀದಿಸಿದ್ದಾರೆಯೇ ಎಂಬುದು ಮಾತ್ರ ತಿಳಿಯುತ್ತಿಲ್ಲ. ಇಷ್ಟು ಹಣ ಪಾವತಿಸಿರುವುದನ್ನು ನೋಡೊದ್ರೆ ಈ ಅಕ್ರಮದಲ್ಲಿ ಪಿಡಿಒ ಪಾಲೆಷ್ಟು, ತಾಲೂಕು ಪಂಚಾಯ್ತಿ ಇಒ ಪಾಲೆಷ್ಟು ಎಂಬ ಅನುಮಾನ ಕಾಡುತ್ತಿದೆ. ಇನ್ನಾದ್ರು ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.

 

Author:

...
Sub Editor

ManyaSoft Admin

share
No Reviews