IPL 2025:
ನಿನ್ನೆ ನಡೆದ ಆರ್ ಸಿಬಿ Vs ಪಿಬಿಕೆಎಸ್ ನಡುವಿನ ಪಂದ್ಯದಲ್ಲಿ ಗೆಲುವಿನ ಬಳಿಕ ಆರ್ ಸಿಬಿಯ ವಿರಾಟ್ ಕೊಹ್ಲಿ ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ನೋಡುತ್ತಾ ತೋರಿದ ಅಗ್ರೇಸ್ಸಿವ್ ವರ್ತನೆ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ, ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಗೆಲುವಿನ ಬಳಿಕ ಶ್ರೇಯಸ್ ಅಯ್ಯರ್ ತೋರಿದ್ದ ವರ್ತನೆಗೆ ಪ್ರತಿಯಾಗಿ, ವಿರಾಟ್ ಕೊಹ್ಲಿ ಕೂಡ ಪಿಬಿಕೆಎಸ್ ತವರ ಮೈದಾನದಲ್ಲಿ ಗೆಲುವು ಸಾಧಿಸಿ ಅವರನ್ನೇ ನೋಡುತ್ತಾ ಗೆಲುವನ್ನು ಸಂಭ್ರಮಿಸಿದರು. ಈ ವೇಳೆ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನಡುವೆ ಮೈದಾನದಲ್ಲೇ ಸಣ್ಣ ಮಾತಿನ ಚಕಮಕಿ ಕೂಡ ಉಂಟಾಯಿತು.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ನ 37 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಯಾಗಿದ್ದು, ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ 7 ಪೋರ್ ಗಳೊಂದಿಗೆ 74 ರನ್ ಬಾರಿಸಿದರು. ಇನ್ನು ಈ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು.
ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು, ಯಾಕಂದರೆ ಪ್ಲೇ ಆಫ್ ತಲುಪಲು 2 ಅಂಕಗಳು ಬಹಳ ಮುಖ್ಯ, ನಾವು ತವರಿನಲ್ಲಿ ಸೋತರೂ ಹೊರಗಡೆ ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂದರು, ಇನ್ನು ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನೊಂದಿಗೆ ರನ್ ಗತಿಯಲ್ಲಿ ತುಂಬಾ ವ್ಯತ್ಯಾಸ ಉಂಟು ಮಾಡ್ತು, ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ದೇವದತ್ ಪಡಿಕ್ಕಲ್ ಗೆ ಕೊಡಬೇಕಿತ್ತು ಅನ್ನೊದು ನನ್ನ ಭಾವನೆ, ಈ ಪ್ರಶಸ್ತಿ ನನಗೆ ಯಾಕೆ ಕೊಟ್ಟಿದ್ದಾರೆ ಅನ್ನೊದು ನನಗೆ ತಿಳಿದಿಲ್ಲ, ಈ ಪ್ರಶಸ್ತಿಗೆ ದೇವ್ ಅರ್ಹರಾಗಿದ್ದರು ಎಂದು ಕೊಹ್ಲಿ ತಿಳಿಸಿದ್ದಾರೆ.