IPL 2025 : ಖಾತೆ ತೆರೆಯದೇ ರನ್‌ ಔಟ್‌ ಆಗಿ ಪೆವಿಲಿಯನ್‌ ಸೇರಿದ ಕರುಣ್‌ ನಾಯರ್ ..!

ಕರುಣ್‌ ನಾಯರ್
ಕರುಣ್‌ ನಾಯರ್
ಕ್ರಿಕೆಟ್‌

IPL 2025 :

ಕ್ರಿಕೆಟ್‌ ಮೈದಾನದಲ್ಲಿ ಪ್ರತಿದಿನವೂ ಒಂದೇ ರೀತಿ ಇರುವುದಿಲ್ಲ, ಒಂದು ಪಂದ್ಯ ಗೆದ್ದರೆ, ಇನ್ನೋಂದು ಪಂದ್ಯ ಔಟಾಗಬಹುದು. ಐಪಿಎಲ್‌ ನಂತಹ ಪಂದ್ಯಾವಳಿಯಲ್ಲಿ ಇಂತಹ ಘಟನೆಗಳು ಸರ್ವೆ ಸಾಮಾನ್ಯ, ಇದಕ್ಕೆ ಎಕ್ಸಾಂಪಲ್‌ ಅಂದರೆ ಕನ್ನಡಿಗ ಕರುಣ್‌ ನಾಯರ್.‌ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಮಿಂಚಿದ್ದ ಕರುಣ್‌ ನಾಯರ್‌ ರಾಜಸ್ಥಾನ್‌ ವಿರುದ್ದ ಕೇವಲ ಮೂರು ಎಸೆತಗಳನ್ನ ಎದುರಿಸಿ ಖಾತೆ ತೆರೆಯದೆ ರನೌಟ್‌ ಆದರು.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಎಲ್ಲರ ಕಣ್ಣು ಕರುಣ್‌ ನಾಯರ್‌ ಮೇಲಿತ್ತು, ಯಾಕಂದರೆ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ನಾಯರ್ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಕರುಣ್ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಪಂದ್ಯದಲ್ಲಿ ಕರುಣ್‌ ರನ್‌ ಕದಿಯುವ ಪ್ರಯತ್ನದಲ್ಲಿ ಖಾತೆ ತೆರೆಯದೇ ರನೌಟ್‌ ಆಗಿ ಪೆವಿಲಿಯನ್‌ ಗೆ ಹಿಂತಿರುಗಿದರು.

Author:

...
Sushmitha N

Copy Editor

prajashakthi tv

share
No Reviews